ಬಾಹುಬಲಿ: ದಿ ಎಪಿಕ್ ಚಿತ್ರದ ಪೋಸ್ಟರ್
ಚಿತ್ರ ಕೃಪೆ: @ssrajamouli
ಮುಂಬೈ: ಭಾರತೀಯ ಸಿನಿಮಾ ಕ್ಷೇತ್ರವನ್ನು ಹೊಸ ದಿಕ್ಕಿಗೆ ಕೊಂಡೊಯ್ದ ಬಾಹುಬಲಿ ಸಿನಿಮಾ ತೆರೆಕಂಡು 10 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಬಾಹುಬಲಿ 1(ಆರಂಭ) ಹಾಗೂ ಬಾಹುಬಲಿ 2 (ಮುಕ್ತಾಯ) ಎರಡೂ ಭಾಗಗಳ ಸಂಯೋಜನೆಯ ‘ಬಾಹುಬಲಿ: ದಿ.ಎಪಿಕ್’ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
ಅಕ್ಟೋಬರ್ 31ರಂದು ಬಾಹುಬಲಿ: ದಿ.ಎಪಿಕ್’ ಚಿತ್ರ ತೆರೆಕಾಣುತ್ತಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಭಾಸ್ ಅವರ ಹೊಸ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಬಾಹುಬಲಿ ಅನೇಕ ಹೊಸ ಪಯಣದ ಆರಂಭವಾಗಿದೆ. ಲೆಕ್ಕಿಸದಷ್ಟು ನೆನಪುಗಳು, ಸ್ಫೂರ್ತಿಯನ್ನು ನೀಡಿದೆ. ಅದಕ್ಕೆ 10 ವರ್ಷಗಳು ಕಳೆದಿವೆ. ಈಗ ಹೊಸ ಮೈಲಿಗಲ್ಲು ಸ್ಥಾಪಿಸಲು, ಎರಡೂ ಭಾಗಗಳ ಸಂಯೋಜನೆಯ ‘ಬಾಹುಬಲಿ: ದಿ.ಎಪಿಕ್’ ಇದೆ ಅಕ್ಟೋಬರ್ 31ರಂದು ತೆರೆಕಾಣುತ್ತಿದೆ. ತನ್ನ ಗತಕಾಲದ ಬಗ್ಗೆ ಸತ್ಯವನ್ನು ತಿಳಿದುಕೊಂಡು ಸಿಂಹಾಸನವನ್ನು ಪಡೆಯುವ ವ್ಯಕ್ತಿಯ ಕಥೆಯನ್ನು ಚಿತ್ರ ಹೇಳುತ್ತದೆ’ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ತೆರೆಕಾಣುತ್ತಿದೆ. ನಟ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮ್ಮನ್ನಾ ಭಾಟಿಯಾ ಎಲ್ಲರನ್ನೂ ಒಳಗೊಂಡ ಚಿತ್ರ ಇದಾಗಿದೆ.
ಬಾಹುಬಲಿ ಚಿತ್ರದ ಮೊದಲ ಭಾಗ 2015ರಲ್ಲಿ ಹಾಗೂ ಎರಡನೇ ಭಾಗ 2017ರಲ್ಲಿ ಬಿಡುಗಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.