ADVERTISEMENT

ಹೊಸ ವರ್ಷದಲ್ಲೂ ಸದ್ದು ಮಾಡುತ್ತಿವೆ 2025ರಲ್ಲಿ ಬಿಡುಗಡೆಯಾದ ಸಿನಿಮಾಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 9:03 IST
Last Updated 1 ಜನವರಿ 2026, 9:03 IST
<div class="paragraphs"><p>ಛಾವಾ ಚಿತ್ರದಲ್ಲಿ&nbsp;ವಿಕ್ಕಿ ಕೌಶಲ್</p></div>

ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್

   

2025ನೇ ಇಸವಿ ಮುಕ್ತಾಯಗೊಂಡು ಹೊಸ ವರ್ಷಕ್ಕೆ ಕಾಲಿಟ್ಟಾಗಿದೆ. ಸಿನಿಮಾಗಳ ದೃಷ್ಟಿಯಿಂದ ನೋಡುವುದಾದರೆ, 2025ನೇ ವರ್ಷ ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿದ ವರ್ಷವಾಗಿದೆ. ವಿಶೇಷವಾಗಿ, ವಿಕ್ಕಿ ಕೌಶಲ್ ನಟನೆಯ ಚಾವಾ, ರಣವೀರ್ ಸಿಂಗ್ ನಟನೆಯ ಧುರಂಧರ್‌, ರಿಶಬ್ ಶೆಟ್ಟಿಯವರ ಕಾಂತಾರ ಅಧ್ಯಾಯ 1 ಸಿನಿಮಾಗಳು ಗಳಿಕೆಯ ಜೊತೆಗೆ ಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿವೆ.

2025ರ ಪ್ರಮುಖ ಹಿಟ್ ಸಿನಿಮಾಗಳು

ಛಾವಾ:

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಛಾವಾ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತು. ಮಾತ್ರವಲ್ಲ, ಕಳೆದ ವರ್ಷ ಅತ್ಯುತ್ತಮ ಗಳಿಕೆ ಕಂಡ ಸಿನಿಮಾಗಳಲ್ಲಿ ಇದೂ ಕೂಡ ಒಂದು. ಸಿನಿಮಾ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಆಧರಿಸಿರುವ ಕಥೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ ₹797.34 ಕೋಟಿ ಗಳಿಕೆ ಕಂಡಿದೆ.

ಈ ಸಿನಿಮಾವನ್ನು 2025ರಲ್ಲಿ ನೋಡಲು ತಪ್ಪಿಸಿಕೊಂಡವರು ‘ನೆಟ್‌ಫ್ಲಿಕ್ಸ್’ ಒಟಿಟಿ ವೇದಿಕೆಯಲ್ಲಿ ವೀಕ್ಷಿಸಬಹುದಾಗಿದೆ.

ಧುರಂಧರ್: ರಣವೀರ್ ಸಿಂಗ್ ನಟೆನೆಯ ಧುರಂಧರ್ ಸಿನಿಮಾ ಡಿಸೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಇನ್ನೂ ಕೂಡ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈಗಾಗಲೇ ₹1000 ಕೋಟಿ ಗಳಿಕೆ ಮೀರಿ ಮುನ್ನಡೆಯುತ್ತಿದೆ. ‌

1999ರಲ್ಲಿ ನಡೆದಿದ್ದ ಕಂದಹಾರ್ ವಿಮಾನ ಅಪಹರಣದ ಮೂಲಕ ಕಥೆ ಆರಂಭವಾಗುತ್ತದೆ. ಜೊತೆಗೆ 2001ರಲ್ಲಿ ನಡೆದ ಸಂಸತ್ತಿನ ಮೇಲಿನ ದಾಳಿಯ ಹಿನ್ನೆಲೆ ಕೂಡ ಕಥೆಯಲ್ಲಿ ಸೇರಿಸಲಾಗಿದೆ. ಜನರಲ್ಲಿ ದೇಶಭಕ್ತಿಯನ್ನು ಹೆಚ್ಚಿಸುವ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಈ ಸಿನಿಮಾದ ಒಟಿಟಿ ವಿತರಣೆಯ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಜನವರಿ 30ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ ಸಾಧ್ಯತೆ ಇದೆ ಎಂದು ಕೆಲವು ವರದಿಗಳು ತಿಳಿಸಿವೆ.

ಹೋಮ್ ಬೌಂಡ್: ನೀರಜ್ ಘಾಯ್‌ವಾನ್ ನಿರ್ದೇಶನದ ‘ಹೋಮ್‌ಬೌಂಡ್’ ಸಿನಿಮಾದಲ್ಲಿ ಇಶಾನ್ ಖಟ್ಟರ್, ವಿಶಾಲ್ ಜೇತ್ವಾ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 98ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿರುವ ಸಿನಿಮಾವಾಗಿದೆ.

2025ರ ಸೆಪ್ಟೆಂಬರ್ 26ರಂದು ಬಿಡುಗಡೆಯಾ ಹೋಂ ಬೌಂಡ್ ಸಿನಿಮಾ, ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ವಲಸೆ ಕಾರ್ಮಿಕರ ಹೋರಾಟ ಮತ್ತು ಗೆಳೆಯರ ನಡುವಿನ ಸವಾಲುಗಳನ್ನು ಪ್ರತಿಬಿಂಬಿಸುವ ಕಥೆಯಾಗಿದೆ. ಇದು ನೆಟ್‌ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಲಭ್ಯವಿದೆ.

ಕಾಂತಾರ ಅಧ್ಯಾಯ 1: ಕನ್ನಡದ ನಟ ರಿಶಬ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅಭಿನಯದ ಕಾಂತಾರಾ ಅಧ್ಯಾಯ 1, ತುಳುನಾಡಿನ ದೈವಾರಾಧನೆಯ ಹಿನ್ನೆಲೆ ಆಧರಿಸಿ ನಿರ್ಮಿಸಿರುವ ಚಿತ್ರವಾಗಿದೆ. ಇದು ಪ್ರೇಕ್ಷಕರ ಮನಗೆಲ್ಲುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ₹850 ಕೋಟಿ ಗಳಿಕೆ ಕಂಡಿದೆ. ಸದ್ಯ, ಈ ಸಿನಿಮಾವನ್ನು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ.

ಹಕ್: ಯಾಮಿ ಗೌತಮ್ ಧರ್ ಹಾಗೂ ಇಮ್ರಾನ್ ಹಶ್ಮಿ ಮುಖ್ಯಪಾತ್ರದಲ್ಲಿ ನಟಿಸಿರುವ ಮಹಿಳಾ ಹಕ್ಕುಗಳ ಕುರಿತ ನೈಜ ಘಟನೆ ಆಧಾರಿತ ಬಾಲಿವುಡ್ ಚಲನಚಿತ್ರ ‘ಹಕ್‌’. ಸುಪ್ರೀಂ ಕೋರ್ಟ್‌ನಲ್ಲಿ ‘ಷಾ ಬಾನೋ’ ಪ್ರಕರಣ ಎಂದೇ ಪ್ರಸಿದ್ಧವಾಗಿದ್ದ, ಮುಸ್ಲಿಂ ಮಹಿಳೆಯೊಬ್ಬರು ವರದಕ್ಷಿಣೆ ಕಿರುಕುಳದ ವಿರುದ್ಧ ನಡೆಸಿದ ಮಹಿಳೆಯರ ಹಕ್ಕುಗಳ ಹೋರಾಟದ ಕುರಿತು ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ.

ಹಕ್ ಸಿನಿಮಾ ನಾಳೆ (ಜನವರಿ 2ರಂದು) ‘ನೆಟ್‌ಫ್ಲಿಕ್ಸ್‌’ನಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.