
ಬಿಗ್‌ಬಾಸ್ 12ನೇ ಆವೃತ್ತಿಯ ವೀಜೇತರಾಗಿರುವ ಗಿಲ್ಲಿ ಅವರಿಗೆ ಸಿನಿತಾರೆಯರು ಹಾಗೂ ರಾಜಕಾರಣಿಗಳು ಅಭಿನಂದಿಸಿದ್ದಾರೆ.
ಈಗ ನಿರ್ದೇಶಕ ಪ್ರೇಮ್ ಅವರು ಗಿಲ್ಲಿ ನಟ ಅವರನ್ನು ಮನೆಗೆ ಕರೆಸಿ ಶುಭಹಾರೈಸಿದ್ದಾರೆ. ‘ಕೆಡಿ’ ಚಿತ್ರದ ಪ್ರಚಾರಕ್ಕಾಗಿ ನಿರ್ದೇಶಕ ಪ್ರೇಮ್ ಅವರು ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದರು. ಆ ಸಂದರ್ಭದಲ್ಲಿ ಗಿಲ್ಲಿ ಅವರ ಆಟವನ್ನು ಮೆಚ್ಚಿಕೊಂಡಿದ್ದರು. ಗಿಲ್ಲಿ ನಟ ಅವರನ್ನು ನಟಿ ರಕ್ಷಿತಾ ಪ್ರೇಮ್ ಅವರು ಮನೆಗೆ ಆಹ್ವಾನಿಸಿ ಶುಭಕೋರಿದ್ದಾರೆ.
'ಕಾಮಿಡಿ ಕಿಲಾಡಿ' ಕಾರ್ಯಕ್ರಮದ ಸಂದರ್ಭದಲ್ಲಿ ನಟ ಜಗ್ಗೇಶ್ ಅವರು ‘ಗಿಲ್ಲಿ ಮುಂದಿನ ವರ್ಷದಲ್ಲಿ ಸೆಲೆಬ್ರೆಟಿ ಆಗಿರುತ್ತಾನೆ ಎಂಬ ಭವಿಷ್ಯ ನುಡಿದಿದ್ದರು’. ಇತ್ತೀಚಿಗೆ ಆ ಹೇಳಿಕೆ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಸದ್ಯ, ಬಿಗ್‌ಬಾಸ್ ವಿನ್ನರ್ ಆಗಿರುವ ಗಿಲ್ಲಿ ಅವರನ್ನು ಜಗ್ಗೇಶ್ ಅವರು ಮನೆಗೆ ಕರೆಸಿ ಅಭಿನಂದಿಸಿದ್ದರು.
ಗಾಲಿ ಜನರ್ಧನ್ ರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮಿ ಅರುಣ ಅವರು ಬಿಗ್‌ಬಾಸ್ 12ನೇ ಆವೃತ್ತಿಯ ವಿಜೇತನನ್ನು ಮನೆಗೆ ಕರೆಸಿ ಶುಭಹಾರೈಸಿದ್ದಾರೆ.
ಇದಲ್ಲದೇ, ಡಿಸಿಎಂ ಡಿಕೆಶಿವಕುಮಾರ್ ಅವರು ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮಕ್ಕೆ ಗಿಲ್ಲಿ ಅವರನ್ನು ಆಹ್ವಾನಿಸಿ ಅಭಿನಂದಿಸಿದ್ದಾರೆ. ವೇದಿಕೆಯಲ್ಲಿ ಸ್ಪಂದನಾ ರಾಮಣ್ಣ ಅವರೂ ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.