ADVERTISEMENT

ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭೂಲಿಯಾ 2’ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಐಎಎನ್ಎಸ್
Published 21 ಏಪ್ರಿಲ್ 2022, 9:03 IST
Last Updated 21 ಏಪ್ರಿಲ್ 2022, 9:03 IST
‘ಭೂಲ್ ಭೂಲಿಯಾ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ
‘ಭೂಲ್ ಭೂಲಿಯಾ 2’ ಚಿತ್ರದಲ್ಲಿ ಕಿಯಾರಾ ಅಡ್ವಾಣಿ   

ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭೂಲಿಯಾ 2’ ಚಿತ್ರದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಿದೆ.

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಮೋಷನ್ ಪೋಸ್ಟರ್ ಹಂಚಿಕೊಂಡಿರುವ ಕಿಯಾರಾ, ‘ರೀಟ್ ಅನ್ನು ಭೇಟಿ ಮಾಡಿಮೋಸ ಹೋಗಬೇಡಿ, ಅವಳು ತುಂಬಾ ಸ್ವೀಟ್ ಅಲ್ಲ’ ಎಂದು ಬರೆದುಕೊಂಡಿದ್ದಾರೆ.

ಅನೀಸ್‌ ಬಾಜ್ಮಿ ಆ್ಯಕ್ಷನ್ ಕಟ್‌ ಹೇಳಿರುವ, ನಟ ಕಾರ್ತಿಕ್ ಆರ್ಯನ್ –ಕಿಯಾರಾ ಅಡ್ವಾಣಿ ಅಭಿನಯದ ‘ಭೂಲ್ ಭೂಲಿಯಾ 2’ ಕಾಮಿಡಿ, ಹಾರರ್ ಕಥಾಹಂದರ ಒಳಗೊಂಡಿರುವ ಚಿತ್ರವಾಗಿದ್ದು, ಮೇ 20ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.

ADVERTISEMENT

ಅಕ್ಷಯ್ ಕುಮಾರ್, ಶೈನಿ ಅಹುಜಾ, ವಿದ್ಯಾ ಬಾಲನ್, ಪರೇಶ್ ರಾವಲ್ ಮತ್ತು ರಾಜ್‌ಪಾಲ್ ಯಾದವ್ ನಟಿಸಿದ್ದ ‘ಭೂಲ್ ಭೂಲಿಯಾ’ ಯಶಸ್ಸು ಗಳಿಸಿತ್ತು.

ಕಿಯಾರಾ, ವರುಣ್ ಧವನ್ ಜೊತೆಗೆ ‘ಜಗ್ ಜಗ್ ಜೀಯೋ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಂತರ ‘ಗೋವಿಂದಾ ನಾಮ್ ಮೇರಾ’ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆಯಲ್ಲಿ ಅಭಿನಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.