ADVERTISEMENT

ಬಾಲಿವುಡ್ ಜನಪ್ರಿಯ ಗಾಯಕಿ, ನಟಿ ಸುಲಕ್ಷಣಾ ಪಂಡಿತ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2025, 6:00 IST
Last Updated 7 ನವೆಂಬರ್ 2025, 6:00 IST
<div class="paragraphs"><p>ಚಿತ್ರ ಕೃಪೆ:<a href="https://x.com/MadhushreeMusic">@Madhushree</a></p></div>

ಚಿತ್ರ ಕೃಪೆ:@Madhushree

   

ಮುಂಬೈ: 'ಉಲ್ಜಾನ್', 'ಚೆಹ್ರೆ ಪೆ ಚೆಹ್ರಾ' ಚಿತ್ರದ ಜನಪ್ರಿಯ ನಟಿ ಹಾಗೂ ಹಿನ್ನೆಲೆ ಗಾಯಕಿ ಸುಲಕ್ಷಣಾ ಪಂಡಿತ್ (71) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಹೋದರ ಲಲಿತ್ ಪಂಡಿತ್ ಅವರು ಮಾಹಿತಿ ನೀಡಿದ್ದಾರೆ.

ನಟಿ ಸುಲಕ್ಷಣ ಅವರು ತೀವ್ರ ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥರಾಗಿದ್ದರು.ಅವರನ್ನು ನಗರದ ನಾನಾವತಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಸಂಜೆ 7ಗಂಟೆ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಲಲಿತ್ ಪಂಡಿತ್ ಅವರು ತಿಳಿಸಿದ್ದಾರೆ.

ADVERTISEMENT

ಸುಲಕ್ಷಣ ಅವರು 1975ರಲ್ಲಿ ‘ಉಲ್ಜಾನ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ಸಂಜೀವ್ ಕುಮಾರ್ ಅವರ ಜತೆ ಮೊದಲು ನಟಿಸಿದ್ದರು. ರಾಜೇಶ್ ಖನ್ನಾ, ಶಶಿ ಕಪೂರ್ ಮತ್ತು ವಿನೋದ್ ಖನ್ನಾ ಅವರ ಜತೆ ಅನೇಕ ಚಿತ್ರಗಳಲ್ಲಿ ಸುಲಕ್ಷಣ ಅವರು ಅಭಿನಯಿಸಿದ್ದಾರೆ.

‘ತು ಹಿ ಸಾಗರ್ ತೂ ಹಿ ಕಿನಾರಾ’ , ‘ಪರ್ದೇಸಿಯಾ ತೇರೆ ದೇಶ್ ಮೇ, ‘ಬೆಕರಾರ್‌ ದಿಲ್ ಟೂಟ್‌ ಗಯಾ’ , ‘ಬಾಂಧಿ ರೆ ಕಹೆ ಪ್ರೀತ್’, ‘ಸೋಮ್ವಾರ್ ಕೊ ಹಮ್ ಮೈಲೆ‘ ಸೇರಿದಂತೆ ಅನೇಕ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ನಟಿ ಸುಲಕ್ಷಣ ಅವರು ಹರಿಯಾಣದ ಹಿಸ್ಸಾರ್‌ನಿಂದ ಬಂದು ಮುಂಬೈ ನಗರದಲ್ಲಿ ನೆಲೆಸಿದ್ದರು. ಬಾಲ್ಯದಿಂದಲೇ ಸಂಗೀತ ಅಭ್ಯಾಸ ಮಾಡಿ, ತಮ್ಮ ವೃತ್ತಿಜೀವನದಲ್ಲಿ ಗಾಯಕಿ ಹಾಗೂ ನಟಿಯಾಗಿ ಮುಂದುವರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.