'ಬಾರ್ಡರ್ 2'
ಮುಂಬೈ: ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟನೆಯ ‘ಬಾರ್ಡರ್ 2’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜ.23ರಂದು ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ₹250 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ನಿರ್ಮಾಪಕಿ ನಿಧಿ ದತ್, ‘ಚಿತ್ರದ ಕನಸೊಂದನ್ನು ಹೊತ್ತ ಗರ್ಭಿಣಿ ಮಹಿಳೆಯು ಧೈರ್ಯವಾಗಿ ಮುನ್ನುಗ್ಗಿದಳು. ಆ ಕನಸಿಗೆ ಸಾಥ್ ನೀಡಿದ ಚಿತ್ರತಂಡಕ್ಕೆ ಧನ್ಯವಾದಗಳು. ಯುದ್ಧ ಆಧಾರಿತ ಸಿನಿಮಾಗಳಲ್ಲಿ 'ಬಾರ್ಡರ್ 2' ಚಿತ್ರವು ಗೆಲುವು ಸಾಧಿಸಿದೆ ಎಂಬ ಹೆಮ್ಮೆ ಇದೆ' ಎಂದು ಬರೆದುಕೊಂಡಿದ್ದಾರೆ.
1997ರಲ್ಲಿ ತೆರೆಕಂಡ 'ಬಾರ್ಡರ್' ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದರು. ಇದರ ಮುಂದುವರಿದ ಭಾಗ ‘ಬಾರ್ಡರ್ 2’ ಸಿನಿಮಾವನ್ನು ಟಿ-ಸೀರೀಸ್ ಮತ್ತು ಜೆಪಿ ಫಿಲ್ಮ್ ನಿರ್ಮಿಸಿದೆ. ಜೆ. ಪಿ. ದತ್ತಾ ಅವರು ನಿರ್ದೇಶಿಸಿದ್ದಾರೆ.
ಇನ್ನು, ಈ ಚಿತ್ರದಲ್ಲಿ ಸನ್ನಿ ಡಿಯೋಲ್, ಸುನೀಲ್ ಶೆಟ್ಟಿ, ಜಾಕಿ ಶ್ರಾಫ್ ಮತ್ತು ಅಕ್ಷಯ್ ಖನ್ನಾ, ವರುಣ್ ಧವನ್, ದಿಶ್ಚಿತ್ ದೋಸಾಂಜ್ ಮತ್ತು ಸೋನಮ್ ಬಾಜ್ವಾ ಅವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.