
ಚಂದನವನದ ನಟ ನಟಿಯರು
2025ರಲ್ಲಿ ಭಾರತೀಯ ಚಿತ್ರರಂಗದ ಹಲವು ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಲ್ಲೂ ವಿಶೇಷವಾಗಿ ಚಂದನವನದ ಅನೇಕ ತಾರಾ ನಟ, ನಟಿಯರು ವಿವಾಹವಾಗಿದ್ದಾರೆ.
ಅರ್ಚನಾ ಕೊಟ್ಟಿಗೆ, ಬಿ.ಆರ್. ಶರತ್
ಅರ್ಚನಾ ಕೊಟ್ಟಿಗೆ, ಬಿ.ಆರ್. ಶರತ್
ಕನ್ನಡ ನಟಿ ಅರ್ಚನಾ ಕೊಟ್ಟಿಗೆ ಹಾಗೂ ಕ್ರಿಕೆಟಿಗ ಬಿ.ಆರ್. ಶರತ್ ಇದೇ ವರ್ಷ ಏಪ್ರಿಲ್ 23ರಂದು ವಿವಾಹವಾದರು. ಅರ್ಚನಾ ಕೊಟ್ಟಿಗೆ ಅವರು ಡಿಯರ್ ಸತ್ಯ , ಹಳದಿ ಗ್ಯಾಂಗ್ಸ್, ವಿಜಯಾನಂದ್, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಮತ್ತು ಹೊಂದಿಸಿ ಬರೆಯಿರಿ ಚಿತ್ರದಲ್ಲಿ ನಟಿಸಿದ್ದಾರೆ.
ಡಾಲಿ ಧನಂಜಯ, ಧನ್ಯತಾ
ಡಾಲಿ ಧನಂಜಯ, ಧನ್ಯತಾ
ಕನ್ನಡದ ಜನಪ್ರಿಯ ನಟನಾಗಿರುವ 'ಡಾಲಿ' ಧನಂಜಯ ಅವರು ಇದೇ ವರ್ಷ ಫೆಬ್ರವರಿ 16ರಂದು ಧನ್ಯತಾ ಅವರನ್ನು ಮೈಸೂರಿನಲ್ಲಿ ವಿವಾಹವಾದರು. ರತ್ನನ್ ಪ್ರಪಂಚ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಡಾಲಿ ಧನಂಜಯ್ ನಟಿಸಿದ್ದಾರೆ.
ನಟಿ ಅನುಶ್ರೀ, ರೋಷನ್
ಅನುಶ್ರೀ, ರೋಷನ್
ಕನ್ನಡ ಖ್ಯಾತ ನಿರೂಪಕಿ ಅನುಶ್ರೀಯವರು ಉದ್ಯಮಿ ರೋಷನ್ ಅವರನ್ನು ಇದೇ ವರ್ಷ ಆಗಸ್ಟ್ 28ರಂದು ವಿವಾಹವಾದರು. ನಿರೂಪಕಿ ಅನುಶ್ರೀ ಅವರು ಬೆಂಕಿ ಪಟ್ನ, ಹುಳಿಕಾರ ಸೈತಾನ್ ಹಾಗೂ ಬೇಲಿ ಕಿರಣ ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀರಾಮ್ ಸ್ಪೂರ್ತಿ
ಶ್ರೀರಾಮ್, ಸ್ಪೂರ್ತಿ:
ಇದೇ ವರ್ಷ 'ಶ್ರೀರಸ್ತು ಶುಭಮಸ್ತು' ಸೀರಿಯಲ್ ನಟ ಶ್ರೀರಾಮ್ ಅವರು ಸ್ಪೂರ್ತಿ ಎಂಬುವವರನ್ನು ನವೆಂಬರ್ 30ರಂದು ವಿವಾಹವಾದರು. ಕನ್ನಡದ ’ಹೊಂದಿಸಿ ಬರೆಯಿರಿ’ ಚಿತ್ರದ ಪ್ರಮುಖ ಪಾತ್ರದಲ್ಲಿ ಶ್ರೀರಾಮ್ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.