ದೀಪಿಕಾ ಪಡುಕೋಣೆ
ಮುಂಬೈ: ಸ್ಯಾಂಡಲ್‌ವುಡ್‌ನಿಂದ ಹಿಡಿದು ಬಾಲಿವುಡ್‌ವರೆಗೂ ಕನ್ನಡತಿ ದೀಪಿಕಾ ಪಡುಕೋಣೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸುಮಾರು ಎರಡು ದಶಕಗಳಿಂದ ಸಿನಿಪ್ರಿಯರನ್ನು ರಂಜಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ದೀಪಿಕಾ, ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ದೀಪಿಕಾ ಅವರ ಇನ್‌ಸ್ಟಾಗ್ರಾಮ್ ರೀಲ್‌ವೊಂದು 1.9 ಶತಕೋಟಿ ವೀಕ್ಷಣೆ ಗಳಿಸಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ರೀಲ್ ಎನಿಸಿಕೊಂಡಿದೆ.
ದೀಪಿಕಾ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 8 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅವರು ತಮ್ಮ ಖಾತೆಯಲ್ಲಿ ಫೋಟೊಶೂಟ್‌ನ ಫೋಟೊಗಳು, ಕುಟುಂಬದೊಂದಿಗಿನ ಕ್ಷಣಗಳು, ರಾಯಭಾರಿಯಾದ ಉತ್ಪನ್ನಗಳ ಮಾಹಿತಿ ಹೀಗೆ ಖಾಸಗಿ ಮತ್ತು ವೃತ್ತಿ ಬದುಕಿನ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ದೀಪಿಕಾ ಹಿಲ್ಟನ್‌ನ ಜಾಗತಿಕ ರಾಯಭಾರಿಯಾಗಿ ಉತ್ಪನ್ನ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡು ರೀಲ್‌ವೊಂದನ್ನು ಹಂಚಿಕೊಂಡಿದ್ದರು. ಇದಕ್ಕೆ ‘ನೀವು ಎಲ್ಲಿ ಇರುತ್ತೀರಾ ಎನ್ನುವುದು ಮುಖ್ಯವಾಗಿರುತ್ತದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಈ ರೀಲ್ ಆಗಸ್ಟ್ 4ರ ಪ್ರಕಾರ 1.9 ಶತಕೋಟಿ ವೀಕ್ಷಣೆ ಕಂಡಿದೆ.
ಈ ಮೂಲಕ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ರೀಲ್ ಎನಿಸಿಕೊಂಡಿದ್ದು, ಹಾರ್ದಿಕ್ ಪಾಂಡ್ಯ ಹಾಗೂ ಕ್ರಿಸ್ಟಿನೊ ರೊನಾಲ್ಡೊ ಅವರನ್ನು ಹಿಂದಿಕ್ಕಿದ್ದಾರೆ.
ಪಾಂಡ್ಯ ಅವರ x BGMI ರೀಲ್ 16 ಶತಕೋಟಿ ಹಾಗೂ ಫ್ಲೆಕ್ಸ್ ಯುವರ್ ನ್ಯೂ ಫೋನ್ ರೀಲ್ 14 ಶತಕೋಟಿ ವೀಕ್ಷಣೆ ಕಂಡಿತ್ತು. ರೊನಾಲ್ಡೊ ಅವರ ರೀಲ್ ಒಂದು 50.3 ಕೋಟಿ ವೀಕ್ಷಣೆ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.