ADVERTISEMENT

Dhurandhar: ಭಾರತದಲ್ಲಿ ದಾಖಲೆಯ ಗಳಿಕೆ ಕಂಡ ರಣವೀರ್ ನಟನೆಯ ‘ಧುರಂಧರ್’

ಪಿಟಿಐ
Published 20 ಡಿಸೆಂಬರ್ 2025, 7:20 IST
Last Updated 20 ಡಿಸೆಂಬರ್ 2025, 7:20 IST
   

ನಟ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ’ಧುರಂಧರ್’ ಭರ್ಜರಿ ಯಶಸ್ಸು ಗಳಿಸುತ್ತಿದೆ. ಮಾತ್ರವಲ್ಲ, ಬಾಕ್ಸ್ ಆಫೀಸ್ ಗಳಿಕೆಯಲ್ಲೂ ವಿಶೇಷ ಮೈಲುಗಲ್ಲು ತಲುಪಿದೆ. ಸದ್ಯ ಗಳಿಕೆಯಲ್ಲಿ ಭಾರತದ ಮಾರುಕಟ್ಟೆಯೊಂದರಲ್ಲೇ ಬರೋಬ್ಬರಿ ₹ 500 ಕೋಟಿಗೂ ಅಧಿಕ ಗಳಿಸಿದೆ ಎಂದು ಚಿತ್ರತಂಡ ಶನಿವಾರ ತಿಳಿಸಿದೆ.

ಡಿಸೆಂಬರ್ 5ರಂದು ವಿಶ್ವದಾದ್ಯಂತ ತೆರೆಕಂಡ ಧುರಂಧರ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್. ಮಾಧವನ್, ರಾಕೇಶ್ ಬೇಡಿ ಸೇರಿದಂತೆ ಅನೇಕ ತಾರಾ ನಟರು ಬಣ್ಣ ಹಚ್ಚಿದ್ದಾರೆ.

ಚಿತ್ರವು ಐತಿಹಾಸಿಕ ಘಟನೆಗಳನ್ನು ಆಧರಿಸಿದ್ದು, ಪ್ರಮುಖವಾಗಿ ಕಂದಹಾರ್ ವಿಮಾನ ಅಪಹರಣ, 2001ರಲ್ಲಿ ಸಂಸತ್ತಿನ ಮೇಲೆ ನಡೆದ ದಾಳಿ ಹಾಗೂ ಮುಂಬೈ ದಾಳಿಗಳಂತಹ ಐತಿಹಾಸಿಕ ಘಟನೆಯನ್ನು ಆಧರಿಸಿದೆ. ಸಿನಿಮಾದಲ್ಲಿ ರಾಜಕೀಯ, ಭಯೋತ್ಪಾದಕ ಚಟುವಟಿಕೆಗಳು ಹಾಗೂ ಗುಪ್ತಚರರ ಕಾರ್ಯಾಚರಣೆಯನ್ನು ಒಳಗೊಂಡಿದೆ. 

ADVERTISEMENT

ಸದ್ಯ, ಸಿನಿಮಾ ಪ್ರೊಡಕ್ಷನ್ ಬ್ಯಾನರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಧುರಂಧರ್ ಸಿನಿಮಾವು ಭಾರತದಲ್ಲಿ ₹503.20 ಕೋಟಿ ಗಳಿಕೆ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡಿದೆ. ಈ ಕುರಿತು ಪೋಸ್ಟ್‌ ಮಾಡಿರುವ ಚಿತ್ರತಂಡ ’ಮತ್ತೊಂದು ದಿನ, ಮತ್ತೊಂದು ದಾಖಲೆ ಮುರಿದಿದೆ!. ನಿಮ್ಮ ಟಿಕೆಟ್‌ಗಳನ್ನು ಇಂದೇ ಬುಕ್ ಮಾಡಿ’. ಎಂದು ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.