ADVERTISEMENT

‘ಅಂಜನಿಪುತ್ರ’ದ ಹಾಡು ಚಿತ್ರೀಕರಣಗೊಂಡ ಜಾಗಕ್ಕೆ ಧೃತಿ ಪುನೀತ್ ರಾಜ್‌ಕುಮಾರ್ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 6:36 IST
Last Updated 13 ಜನವರಿ 2026, 6:36 IST
<div class="paragraphs"><p>ಪುನೀತ್ ರಾಜ್‌ಕುಮಾರ್ ಹಾಗೂ ಮಗಳು&nbsp;ಧೃತಿ&nbsp;ಪುನೀತ್ ರಾಜ್‌ಕುಮಾರ್ &nbsp;</p></div>

ಪುನೀತ್ ರಾಜ್‌ಕುಮಾರ್ ಹಾಗೂ ಮಗಳು ಧೃತಿ ಪುನೀತ್ ರಾಜ್‌ಕುಮಾರ್  

   

ಚಿತ್ರ: ಇನ್‌ಸ್ಟಾಗ್ರಾಂ

ದಿವಂಗತ ನಟ ಪುನೀತ್‌ ರಾಜ್‌ಕುಮಾರ್ ಅವರ ಪುತ್ರಿ ಧೃತಿ ಅವರು ‘ಅಂಜನಿಪುತ್ರ’ ಸಿನಿಮಾದ ಹಾಡೊಂದು ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ಫೋಟೊಗಳನ್ನು ಧೃತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಇತ್ತೀಚೆಗೆ ಧೃತಿ ಅವರು ಇಂಗ್ಲೆಂಡ್‌ನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ 'ದಿ ಕೆಲ್ಪೀಸ್'ಗೆ ಭೇಟಿ ನೀಡಿದ್ದರು. ವಿಶ್ವದ ಅತೀ ಎತ್ತರದ ಉಕ್ಕಿನ ಕುದುರೆ ಶಿಲ್ಪಗಳ ಮುಂದೆ ಧೃತಿ ರಾಜ್‌ಕುಮಾರ್‌ ಫೋಟೊಗೆ ಪೋಸ್‌ ಕೊಟ್ಟಿದ್ದಾರೆ.

ನ್ಯೂಯಾರ್ಕ್ ‘ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ - ದಿ ನ್ಯೂ ಸ್ಕೂಲ್’ನಲ್ಲಿ ಪದವಿ ಶಿಕ್ಷಣ ಪಡೆದಿರುವ ಧೃತಿ ರಾಜ್‌ಕುಮಾರ್ ಸದ್ಯ ಯುಕೆ ಪ್ರವಾಸದಲ್ಲಿದ್ದಾರೆ. ವಿಶೇಷ ಏನೆಂದರೆ ಈ ಹಿಂದೆ ಪುನೀತ್ ರಾಜ್‌ಕುಮಾರ್‌ ಅವರು ತಮ್ಮ ‘ಅಂಜನಿಪುತ್ರ’ ಸಿನಿಮಾದ ಮಗರಿಯಾ ಹಾಡನ್ನು ದಿ ಕೆಲ್ಪೀಸ್ ಮುಂದೆ ಚಿತ್ರೀಕರಿಸಿದ್ದರು.

98 ಅಡಿ ಎತ್ತರ ಇರುವ ಉಕ್ಕಿನ ಕುದುರೆ ಪ್ರತಿಮೆಗಳ ಮುಂದೆ ಪುನೀತ್ ರಾಜ್‌ಕುಮಾರ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದ್ದರು. ಇದೀಗ ಅದೇ ಸ್ಥಳಕ್ಕೆ ಧೃತಿ ಪುನೀತ್‌ರಾಜ್‌ಕುಮಾರ್‌ ಭೇಟಿ ನೀಡಿ ಖುಷಿಪಟ್ಟಿದ್ದಾರೆ. ಸದ್ಯ ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.