ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರ ತೆರೆಕಂಡು 4 ವರ್ಷಗಳಾಗಿವೆ. ಈ ಚಿತ್ರದ ಅನುಭವಗಳನ್ನು ನಟಿ ರೀಷ್ಮಾ ನಾಣಯ್ಯ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ಚಿತ್ರದ ನೆನಪುಗಳನ್ನು ಹಂಚಿಕೊಂಡ ರೀಷ್ಮಾ ನಾಣಯ್ಯ ಅವರು, ‘4 ವರ್ಷಗಳ ಹಿಂದೆ ‘ಏಕ್ ಲವ್ ಯಾ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಆ ಸಮಯದಲ್ಲಿ ನನಗೆ ಕೂತುಹಲ ಭಯ, ಆತಂಕದಿಂದ ಇರುತ್ತಿದ್ದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹತ್ತಾರು ಕನಸು ಕಂಡಿದ್ದೆ. ಈ ಚಿತ್ರವು ಕೇವಲ ಚಿತ್ರರಂಗಕ್ಕೆ ಪದಾರ್ಪಣೆಯಷ್ಟೇ ಆಗಿಲ್ಲ. ಇದು ನನ್ನ ಬದುಕಿನ ಒಂದು ಸುಂದರ ಪಯಣದ ಆರಂಭವಾಗಿತ್ತು’ಎಂದು ಹೇಳಿಕೊಂಡಿದ್ದಾರೆ.
‘ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಕಲಿತ ಪ್ರತಿಯೊಂದು ಪಾಠ, ಎದುರಿಸಿದ ಸವಾಲುಗಳು, ಪ್ರತಿಯೊಂದು ನೆನಪುಗಳು ಇಂದು ನಾನು ಏನಾಗಿದ್ದೇನೆ ಎಂಬುವುದಕ್ಕೆ ಸಾಕ್ಷಿಯಾಗಿವೆ. ನನಗೆ ಕ್ಯಾಮೆರಾ ಹಿಡಿದಾಗ ಭಯ, ನಡುಕ, ತಳಮಳದ ಅನುಭವಾಗುತ್ತಿತ್ತು. ಆ ಸಮಯದಲ್ಲಿ ಪ್ರತಿಯೊಂದು ದೃಶ್ಯಕ್ಕೂ ಮೊದಲು ನಾನು ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆ’ ಎಂದಿದ್ದಾರೆ.
ನನ್ನ ಮೇಲೆ ನನಗೆ ಸಂಪೂರ್ಣ ನಂಬಿಕೆ ಬರುವ ಮೊದಲೇ, ನನ್ನನ್ನು ನಂಬಿದ ಪ್ರತಿಯೊಬ್ಬರಿಗೂ ನಾನು ಸದಾ ಋಣಿಯಾಗಿರುತ್ತೇನೆ. 'ಏಕ್ ಲವ್ ಯಾ' ಚಿತ್ರತಂಡಕ್ಕೆ ಕೃತಜ್ಞತೆ ತಿಳಿಸುತ್ತೇನೆ’ ಎಂದು ರೀಷ್ಮಾ ನಾಣಯ್ಯ ಅವರು ಬರೆದುಕೊಂಡಿದ್ದಾರೆ.
ಈ ಚಿತ್ರದಲ್ಲಿ ರಕ್ಷಿತಾ ಸಹೋದರ ರಾಣಾ ಹಾಗೂ ರಚಿತಾ ರಾಮ್, ರೀಷ್ಮಾ ನಾಣಯ್ಯ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.