
ಚಿತ್ರ ಕೃಪೆ: prk.productions
ಬೆಂಗಳೂರು: ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಗಲಿ ಇಂದಿಗೆ ನಾಲ್ಕು ವರ್ಷಗಳು. ಅಪ್ಪು ಅವರು ಕಾಣಿಸಿಕೊಂಡ ಡಾಕ್ಯೂಫಿಲಂ 'ಗಂಧದಗುಡಿ'ಗೆ ಮೂರು ವರ್ಷದ ಸಂಭ್ರಮ. ಈ ಚಿತ್ರವು ಪಿಆರ್‌ಕೆ ಪ್ರೊಡಕ್ಷನ್ಸ್‌ಅಡಿ ನಿರ್ಮಾಣಗೊಂಡಿದ್ದು, ಅಮೋಘವರ್ಷ ಅವರು ನಿರ್ದೇಶಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ‘ಗಂಧದಗುಡಿ ಅಪ್ಪು ಅವರ ಕೊನೆಯ ಚಿತ್ರವಾಗಿದ್ದು, ಇದು ಅವರ ನೆಚ್ಚಿನ ಯೋಜನೆಗಳಲ್ಲೊಂದು. ಈ ಡಾಕ್ಯೂಫಿಲಂನಲ್ಲಿ ಅವರು ಕರ್ನಾಟಕದ ನೈಸರ್ಗಿಕ ಸೌಂದರ್ಯ, ಅಲ್ಲಿನ ಜನರ ಜೀವನಶೈಲಿಯನ್ನು ಪರಿಚಯಿಸುತ್ತಾರೆ. ಇದು ಕೇವಲ ಡಾಕ್ಯುಮೆಂಟರಿ ಮಾತ್ರವಲ್ಲ. ಪುನೀತ್ ಅವರಿಗೆ ಪ್ರಕೃತಿಯ ಹಾಗೂ ಕರುನಾಡಿನ ಮೇಲೆ ಅವರ ಅಭಿಮಾನವನ್ನು ತೋರಿಸುತ್ತದೆ. ನೈಸರ್ಗಿಕ ಪರಂಪರೆಯ ಬಗ್ಗೆ ಹೆಮ್ಮೆ ಪಡುವ ಸಿನಿಮಾ' ಎಂದಿದ್ದಾರೆ.
‘ಗಂಧದಗುಡಿ' ಚಿತ್ರಕ್ಕೆ 3 ವರ್ಷಗಳ ಸಂಭ್ರಮ ಕುರಿತು ಪಿಆರ್‌ಕೆ ಪ್ರೊಡಕ್ಷನ್ಸ್, ಅಪ್ಪು ಅವರ ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆ, ಸಂಸ್ಕೃತಿ ಮತ್ತು ಅದ್ಭುತ ಕಥೆಗಳನ್ನು ಆಚರಿಸುವ ಪಯಣ’ ಎಂದು ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.