ADVERTISEMENT

ಡೈಲಾಗ್ಸ್ ಇಲ್ಲದೇ ಮೋಡಿ ಮಾಡಿದ ವಿಜಯ್ ಸೇತುಪತಿಯ 'ಗಾಂಧಿ ಟಾಕ್ಸ್' ಚಿತ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 12:31 IST
Last Updated 27 ಜನವರಿ 2026, 12:31 IST
<div class="paragraphs"><p>‘ಗಾಂಧಿ ಟಾಕ್ಸ್' ಚಿತ್ರದ ಪೋಸ್ಟರ್&nbsp;</p></div>

‘ಗಾಂಧಿ ಟಾಕ್ಸ್' ಚಿತ್ರದ ಪೋಸ್ಟರ್ 

   

ಕೃಪೆ: ಎಕ್ಸ್ ಖಾತೆ

ಕಿಶೋರ್ ಪಾಂಡುರಂಗ್ ಬೇಲೇಕರ್ ನಿರ್ದೇಶನ, ವಿಜಯ್ ಸೇತುಪತಿ, ಆದಿತಿ ರಾವ್‌ ಹೈದರಿ ಹಾಗೂ ಸಿದ್ಧಾರ್ಥ್ ಜಾಧವ್ ನಟನೆಯ 'ಗಾಂಧಿ ಟಾಕ್ಸ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ADVERTISEMENT

‘ಗಾಂಧಿ ಟಾಕ್ಸ್' ಟ್ರೇಲರ್‌ನಲ್ಲಿ, ‘ನಟ ವಿಜಯ್ ಸೇತುಪತಿ ಹಾಗೂ ಆದಿತಿ ರಾವ್‌ ಹೈದರಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಡೈಲಾಗ್ ಇಲ್ಲದೇ ಕೇವಲ ಹಿನ್ನೆಲೆ ಸಂಗೀತದ ಮೂಲಕ ಕಥೆ ಹೆಣೆದಂತಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅವರು ಮಿಡಲ್ ಕ್ಲಾಸ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ನಟಿ ಆದಿತಿ ರಾವ್‌ ಕುಟುಂಬದಿಂದ ದೂರ ಆಗಿರುತ್ತಾರೆ.

ಹಸಿವು, ಉದ್ಯೋಗದಿಂದ ವಂಚಿನಾಗಿದ್ದ ಯುವಕ ಅಸಮಾನತೆ ವಿರುದ್ಧ ಹೋರಾಡಲು ಮುಂದಾಗುತ್ತಾನೆ. ಹೋರಾಟದ ಹಾದಿ ಬದಲು ಹಣದ ಮೋಹಕ್ಕೆ ಒಳಗಾಗುತ್ತಾನೆ. ಟ್ರೇಲರ್ ಕೊನೆಯ ಹಂತದಲ್ಲಿ ಅಸಮಾನತೆ ವಿರುದ್ಧ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್, ಜ್ಯೋತಿರಾವ್ ಫುಲೆ, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಚಿತ್ರಗಳನ್ನು ತೋರಿಸಲಾಗಿದೆ. ‘ಗಾಂಧಿ ಟಾಕ್ಸ್' ಚಿತ್ರದ ಅನೇಕ ಕುತೂಹಲಕಾರಿ ವಿಷಯಗಳ ಬಗ್ಗೆ ಚಿತ್ರ ಬಿಡುಗಡೆ ಬಳಿಕ ತಿಳಿಯಬೇಕಿದೆ.

‘ಗಾಂಧಿ ಟಾಕ್ಸ್' ಚಿತ್ರವು ಜನವರಿ 30ರಂದು ತೆರೆಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.