ADVERTISEMENT

ರ‍್ಯಾಂಪ್‌ ಮೇಲೆ ಕಾಲು ಜಾರಿದ ಭುವನ ಸುಂದರಿ ಹರ್ನಾಜ್‌; ನಂತರ ಆಗಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2025, 6:34 IST
Last Updated 19 ಡಿಸೆಂಬರ್ 2025, 6:34 IST
   

ಮಿಸ್ ಯೂನಿವರ್ಸ್ 2021ರ ವಿಜೇತೆ ಹರ್ನಾಜ್ ಸಂಧು ಅವರು ಜ್ಯೂರಿ ಸೆಷನ್ ನಡಿಗೆ ಸಂದರ್ಭದಲ್ಲಿ ಎಡವಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಅವರು, ಆತ್ಮವಿಶ್ವಾಸ ಹಾಗೂ ಮುಗುಳುನಗೆಯಿಂದ ಸ್ಪರ್ಧೆಯಲ್ಲಿ ಮುನ್ನಡೆದಿದ್ದಾರೆ. ಇದು ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.

ವಿಯೆಟ್ನಾಂನ ಹೋ ಚಿ ಮಿನ್ ಸಿಟಿಯಲ್ಲಿ, 2025ರ  ಮಿಸ್ ಕಾಸ್ಮೋ ಇಂಟರ್‌ನ್ಯಾಷನಲ್ ಜ್ಯೂರಿ ಸೆಷನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ವರ್ಧೆಯಲ್ಲಿ ಭಾರತದ ನಟಿ ಹಾಗೂ ರೂಪದರ್ಶಿಯಾಗಿರುವ ಹರ್ನಾಜ್ ಕೌರ್ ಸಂಧು ಅವರು ಭಾಗವಹಿಸಿದ್ದರು.

ಮಿಸ್ ಕಾಸ್ಮೋ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಹರ್ನಾಜ್ ಸಂಧು ಅವರು ಫಿನಾಲೆ ಸುತ್ತಿಗೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 20ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹರ್ನಾಜ್ ಸಂಧು ಅವರು ಕಿತ್ತಲೆ– ಗೋಲ್ಡ್ ಬಣ್ಣದಲ್ಲಿ ಮಿನುಗುವ ಪಾರದರ್ಶಕ ಗೌನ್ ಧರಿಸಿ, ಮಿಸ್ ಕಾಸ್ಮೋ ಇಂಟರ್‌ನ್ಯಾಷನಲ್ 2025ರ ಸ್ಪರ್ಧೆಯಲ್ಲಿ ಮಿಂಚಿದ್ದಾರೆ.

ಚಂಡೀಗಡದ ಸಿಖ್ ಕುಟುಂಬದ ಹರ್ನಾಜ್ ಸಂಧು ಅವರು 2021ರ ಮಿಸ್ ಯೂನಿವರ್ಸ್ ಕಿರೀಟ ಗೆದ್ದು ಸಾಧನೆ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.