
ಚಿತ್ರ ಕೃಪೆ: @dulQuer
ಮಲಯಾಳಂ ನಟ ದುಲ್ಕರ್ ಸಲ್ಮಾನ್ ಹಾಗೂ ಭಾಗ್ಯಶ್ರೀ ಬೋರ್ಸೆ ನಟನೆಯ 'ಕಾಂತ’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ಈ ಚಿತ್ರವನ್ನು ಸೆಲ್ವಮಣಿ ಸೆಲ್ವರಾಜ್ ಅವರು ನಿರ್ದೇಶಿಸಿದ್ದಾರೆ.
'ಕಾಂತ’ ಸಿನಿಮಾವನ್ನು ದುಲ್ಕರ್ ಅವರ ವೇಫೇರರ್ ಫಿಲ್ಮ್ಸ್ ಹಾಗೂ ರಾಣಾ ದಗ್ಗುಬಾಟಿಯ ಸ್ಪಿರಿಟ್ ಮೀಡಿಯಾ ಬ್ಯಾನರ್‌ನ ಅಡಿಯಲ್ಲಿ ನಿರ್ಮಿಸಲಾಗಿದೆ.
‘ಕಾಂತ’ ಚಿತ್ರದೊಳಗೊಂದು ಚಿತ್ರಕಥೆ. ಇಲ್ಲಿ ನಟ ಚಂದ್ರನ್ ಪಾತ್ರದಲ್ಲಿ (ದುಲ್ಕರ್), ನಿರ್ದೇಶಕ ಅಯ್ಯನ ಪಾತ್ರದಲ್ಲಿ ಸಮುಥಿರಕನಿ ಅವರು ನಟಿಸಿದ್ದಾರೆ.
‘ಶಾಂತ’ ಶೀರ್ಷಿಕೆಯನ್ನು ಬದಲಾಯಿಸಿ ‘ಕಾಂತ’ ಎಂದು ಮರುನಾಮಕರಣ ಮಾಡಿದಾಗ ನಿರ್ದೇಶಕ– ಕಲಾವಿದರ ನಡುವಿನ ಸಣ್ಣ ಮುನಿಸು, ದೊಡ್ಡ ವಾಗ್ವಾದಕ್ಕೆ ಕಾರಣವಾಗುತ್ತದೆ. ಕಲಾವಿದನ ನಿಷ್ಠೆ –ಅಹಂಕಾರ, ಗುರು –ಶಿಷ್ಯರ ನಡುವಿನ ವಿವಾದ ಕುರಿತ ಚಿತ್ರ ‘ಕಾಂತ’ ಎಂದು ಚಿತ್ರತಂಡ ಹೇಳಿದೆ.
ಸದ್ಯ, 'ಕಾಂತ’ ಚಿತ್ರದ ಟ್ರೇಲರ್‌ನಲ್ಲಿ ಕಲಾವಿದರು ಬ್ಲಾಕ್ ಆ್ಯಂಡ್ ವೈಟ್‌ನಲ್ಲಿ ಕಂಗೊಳಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.