
ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಅ. 2ರಂದು ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಯಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’ ವಿಶ್ವಾದ್ಯಂತ ₹818 ಕೋಟಿ ಗಳಿಸಿದೆ.
ರಿಷಬ್ ಶೆಟ್ಟಿ
ಕಾಂತಾರ ಚಾಪ್ಟರ್ 1 ಬಿಡುಗಡೆಯಾಗಿ ಇಂದಿಗೆ 25 ದಿನಗಳನ್ನು ಪೂರೈಸಿದೆ. ಕಾಂತಾರ ಸಿನಿಮಾವನ್ನು ಕಣ್ತುಂಬಿಕೊಂಡ ಪ್ರೇಕ್ಷಕರಿಗೆ ವಯಸ್ಸಾದ ವೃದ್ಧ ‘ಮಾಯಕಾರ’ ಪಾತ್ರದಲ್ಲಿ ನಟಿಸಿದ್ದು ಯಾರು ಎಂಬ ಪ್ರಶ್ನೆ ಕಾಡುತ್ತಿತ್ತು. ಕೆಲವರು ಮಾಯಕಾರ ಪಾತ್ರದಲ್ಲಿ ನಟಿಸಿದ್ದು ರಿಷಬ್ ಶೆಟ್ಟಿ ಎಂದರೆ, ಇನ್ನು ಕೆಲವರು ಬೇರೆ ಯಾರೋ ವಯಸ್ಸಾದ ವೃದ್ಧ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ ಆ ಪಾತ್ರ ಮಾಡಿದ್ದು ಯಾರಿರಬಹುದು ಎಂದು ಎಲ್ಲರಲ್ಲೂ ಕುತೂಹಲ ಮನೆಮಾಡಿತ್ತು.
ಈಗ ಹೊಂಬಾಳೆ ಫಿಲ್ಮ್ಸ್ ‘ಮಾಯಕಾರ’ ಪಾತ್ರ ಮಾಡಿದ್ದು ಯಾರೆಂದು ರಿವೀಲ್ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ‘ಮಾಯಕಾರ’ ಮೇಕಪ್ ಮೇಕಿಂಗ್ ವಿಡಿಯೊವನ್ನು ಹಂಚಿಕೊಂಡಿದೆ. ಮಾಯಕಾರ ಮೇಕಿಂಗ್ ವಿಡಿಯೊದಲ್ಲಿ ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದು ರಿಷಬ್ ಶೆಟ್ಟಿ ಎಂದು ಅಧಿಕೃತವಾಗಿ ಮಾಹಿತಿ ನೀಡಿದೆ. ಬಿಡುಗಡೆಯಾದ ವಿಡಿಯೊದಲ್ಲಿ ರಿಷಬ್ ಶೆಟ್ಟಿ, ಶೂಟಿಂಗ್ ಸೆಟ್‌ಗೆ ಬೆಳಿಗ್ಗೆ 3 ಗಂಟೆಗೆ ಬಂದಿದ್ದಾರೆ. ಬಳಿಕ ಅವರಿಗೆ ಸುಮಾರು 6 ಗಂಟೆಗಳ ಕಾಲ ‘ಮಾಯಕಾರ’ ಮೇಕಪ್ ಮಾಡಿಕೊಂಡಿದ್ದನ್ನು ತೋರಿಸಲಾಗಿದೆ. ರಿಷಬ್ ಶೆಟ್ಟಿ ಅವರು ಮಾಯಕಾರ ಅವತಾರದಲ್ಲಿ ಡೈಲಾಗ್ ತಯಾರಿ, ಆ್ಯಕ್ಷನ್ ಕಟ್ ಹೇಳುತ್ತಿರುವ ದೃಶ್ಯಗಳನ್ನು ಮೇಕಿಂಗ್ ವಿಡಿಯೊದಲ್ಲಿ ಕಾಣಬಹುದು. ಇನ್ನು, ಒಟ್ಟಾರೆಯಾಗಿ ರಿಷಬ್ ಶೆಟ್ಟಿ ಅವರು, ಬೆರ್ಮೆ ಹಾಗೂ ಮಾಯಕಾರ ಎರಡು ಪಾತ್ರದಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.