ADVERTISEMENT

ಕಾಂತಾರ ಅಧ್ಯಾಯ -1 ಬಿಡುಗಡೆ: ರಿಷಬ್ ಶೆಟ್ಟಿಯನ್ನು ಬಿಗಿದಪ್ಪಿ ಪತ್ನಿ ಭಾವುಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2025, 6:03 IST
Last Updated 2 ಅಕ್ಟೋಬರ್ 2025, 6:03 IST
   

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ-1 ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಿನ್ನೆ ನಡೆದ ಚಿತ್ರದ ಪ್ರೀಮಿಯರ್ ಶೋ ವೇಳೆ ಪ್ರಗತಿ ಶೆಟ್ಟಿ ಪತಿಯನ್ನು ಬಿಗಿದಪ್ಪಿ ಭಾವುಕರಾಗಿದ್ದಾರೆ.

ಕಾಂತಾರ ಅಧ್ಯಾಯ–1 ಚಿತ್ರಕ್ಕಾಗಿ ನಿರ್ದೇಶಕರು ಸೇರಿದಂತೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಅದೆಲ್ಲವನ್ನು ಅವರು ಧೈರ್ಯವಾಗಿ ಎದುರಿಸಿ ಕೊನೆಗೂ ಸಿನಿಮಾ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಚಿತ್ರ ಅಧಿಕೃತವಾಗಿ ಇಂದು (ಗುರುವಾರ) ಬಿಡುಗಡೆಯಾಗಿದ್ದು, ಕನ್ನಡ ಮಾತ್ರವಲ್ಲ ಅನೇಕ ಭಾಷೆಗಳಲ್ಲೂ ಬಿಡುಗಡೆಗೊಂಡಿದೆ. ಸಿನಿಮಾ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಸೇರಿ ಹಲವರು ಬಣ್ಣ ಹಚ್ಚಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.