ADVERTISEMENT

ಕಾಂತಾರ ಅಧ್ಯಾಯ–1 ಯಶಸ್ಸು: ಅಭಿಮಾನಿಗಳ ಮನದಾಳದ ಮಾತು ಹಂಚಿಕೊಂಡ ಚಿತ್ರ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಅಕ್ಟೋಬರ್ 2025, 7:26 IST
Last Updated 10 ಅಕ್ಟೋಬರ್ 2025, 7:26 IST
<div class="paragraphs"><p>ಚಿತ್ರ ಕೃಪೆ:&nbsp;<a href="https://x.com/hombalefilms">Hombale Films<br></a></p></div>

ಚಿತ್ರ ಕೃಪೆ: Hombale Films

   

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ವಿಶ್ವದಾದ್ಯಂತ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಕುರಿತು ಪ್ರೇಕ್ಷಕರ ಅಭಿಪ್ರಾಯವನ್ನು ಸಂಗ್ರಹಿಸಿದ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

‘ಹೃದಯಸ್ಪರ್ಶಿ ಮಾತುಗಳು ಮತ್ತು ದೈವಿಕ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ' ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಾಂತಾರ ಅಧ್ಯಾಯ–1 ವೀಕ್ಷಿಸಿದ ಬಳಿಕ ಅನೇಕ ಸ್ವಾಮೀಜಿಗಳು ಹಾಗೂ ಪ್ರೇಕ್ಷಕರು ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಿನಿಮಾ ನೋಡಿದ ರಾಕಿಂಗ್ ಸ್ಟಾರ್ ಯಶ್ ಅವರು ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಆಗಲಿದೆ ಎಂದಿದ್ದರು. ಪ್ರಕಾಶ್ ರಾಜ್ ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು ಹಾಗೂ ಕನ್ನಡ ಚಲನಚಿತ್ರಗಳ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದರು.

ದೆಹಲಿ ಮುಖ್ಯ ಮಂತ್ರಿ ರೇಖಾ ಗುಪ್ತಾ ಅವರು ಕಾಂತಾರ ಅಧ್ಯಾಯ1 ಚಿತ್ರ ತಂಡವನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ತೆಲುಗು ನಟ ಜೂನಿಯರ್ ಎನ್‌ಟಿಆರ್, ಸೇರಿದಂತೆ ಅನೇಕ ಸಿನಿ ತಾರೆಯರು ಚಿತ್ರ ಕುರಿತು ಮೆಚ್ಚುಗೆ ಸೂಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.