ಚಿತ್ರ ಕೃಪೆ: @taran_adarsh
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕಾಂತಾರ ಅಧ್ಯಾಯ– 1 ಇಂದು (ಗುರುವಾರ) ವಿಶ್ವದಾದಂತ್ಯ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಖ್ಯಾತ ಸಿನಿಮಾ ವಿಮರ್ಶಕ ತರುಣ್ ಆದರ್ಶ್ ಅವರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ರಿಷಬ್ ಶೆಟ್ಟಿ ಕಾಂತಾರ ಅಧ್ಯಾಯ– 1 ರಲ್ಲಿ ಪುರಾಣ, ಜಾನಪದ ಬಳಸಿ ಕಥೆಯನ್ನು ಸಂಯೋಜಿಸಿ ಪ್ರೇಕ್ಷಕರ ಸೆಳೆದಿದ್ದಾರೆ.
ಚಿತ್ರದ ಆರಂಭದಿಂದಲೇ ಪ್ರೇಕ್ಷಕರನ್ನು ಆಧ್ಯಾತ್ಮ ದೈವದ ಜಗತ್ತಿಗೆ ಕರೆದೊಯ್ಯುತ್ತದೆ. ಕಥೆ ಭಾವನೆಗಳ ಮೇಲಿನ ಅವರ ಹಿಡಿತ ಅಸಾಧಾರಣವಾಗಿದೆ. ಚಿತ್ರ ಮುಗಿದ ನಂತರವೂ ಕಥೆ ನೆನಪಿನಲ್ಲಿ ಉಳಿಯಲಿದೆ.
ಕಲಾವತಿಯಾಗಿ ನಟಿ ರುಕ್ಮಿಣಿ ವಸಂತ್ ಕೂಡ ಅಧ್ಬುತವಾಗಿ ನಟಿಸಿದ್ದಾರೆ. ಹಿನ್ನಲೆ ಸಂಗೀತ ಪ್ರತಿ ಕ್ಷಣವೂ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ನೀಡುತ್ತದೆ' ಎಂದಿದ್ದಾರೆ.
ನಮ್ಮ ಕಾಲದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರು ಎಂದು ರಿಷಬ್ ಶೆಟ್ಟಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ' ಎಂದು ವಿಮರ್ಶಕ ತರುಣ್ ಆದರ್ಶ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡು ಸಿನಿಮಾ ಯಶಸ್ಸಿಗೆ ಶುಭ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.