ADVERTISEMENT

ಕಾಂತಾರ ಸಿನಿಮಾದಿಂದ ಹಲವು ವರ್ಷಗಳ ಕನಸು ನನಸಾಗಿದೆ : ನಟ ಕಿರಣ್ ಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2025, 7:37 IST
Last Updated 14 ಅಕ್ಟೋಬರ್ 2025, 7:37 IST
<div class="paragraphs"><p>ಚಿತ್ರ ಕೃಪೆ:&nbsp;<strong><a href="https://www.instagram.com/kiran_kumar_hnr/">kiran_kumar_hnr</a></strong></p></div>

ಚಿತ್ರ ಕೃಪೆ: kiran_kumar_hnr

   

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಅಧ್ಯಾಯ–1 ಚಿತ್ರ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಟಿಸಿರುವ ನಟ ಕಿರಣ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ರಿಷಬ್ ಶೆಟ್ಟಿಯವರ ಜೊತೆ ಕೆಲಸ ಮಾಡಬೇಕೆಂಬುದು ಹಲವು ವರ್ಷಗಳ ಹಂಬಲ. ಕಾಂತಾರ ಅಧ್ಯಾಯ-1ರಲ್ಲಿ ಸಿಕ್ಕ ಪುಟ್ಟ ಪಾತ್ರ ಈ ಹಂಬಲಕ್ಕೆ ಹುರುಪು ನೀಡಿತು. ಸಿನಿಮಾ ಕುರಿತಾದ ಅವರ ಪ್ರೀತಿ, ಶ್ರಮ, ಶ್ರದ್ದೆ, ಉತ್ಸಾಹದ ಕುರಿತು ಕೇಳಿದ ಮಾತುಗಳಿಗೆ ದೃಶ್ಯ ರೂಪ ದೊರೆಯಿತು. ಪುಟ್ಟದ್ದೇ ಆದರೂ ಜನ ಗುರುತಿಸುವಂತ ಪಾತ್ರ ನೀಡಿದ್ದಾರೆ‘ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಕಾಂತಾರ ಅಧ್ಯಾಯ–1 ಸಿನಿಮಾ ಕುರಿತಂತೆ ರಾಜಕಾರಣಿಗಳು, ಬಾಲಿವುಡ್, ಸ್ಯಾಂಡಲ್‌ವುಡ್, ಸೇರಿದಂತೆ ಅನೇಕ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ರುಕ್ಕಿಣಿ ವಸಂತ್, ಗುಲ್ಕನ್ ದೇವಯ್ಯ, ಜಯರಾಮ್, ರಾಕೇಶ್ ಪೂಜಾರಿ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.