ಚಿತ್ರ ಕೃಪೆ: karthi_mahesh
ಕೀನ್ಯಾ ವಿದೇಶ ಪ್ರವಾಸದಲ್ಲಿ ಕಾರ್ತಿಕ್ ಮಹೇಶ್ ಅವರ ಜತೆ ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿಯಾಗಿದ್ದ ಅರವಿಂದ್ ಕೆ.ಪಿ ಕೂಡ ಕಾಣಿಸಿಕೊಂಡಿದ್ದಾರೆ.
ಕಿರುತೆರೆಯಲ್ಲಿ ನಟನಾಗಿ ಮಿಂಚುತ್ತಿದ್ದ ಕಾರ್ತಿಕ್ ಮಹೇಶ್ ಅವರು ಬಿಗ್‌ಬಾಸ್ ಸೀಸನ್ 10ಕ್ಕೆ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ್ದರು.
ವೀಕ್ಷಕರಿಂದ ಅತಿ ಹೆಚ್ಚು ವೋಟ್ ಪಡೆದು ಬಿಗ್‌ಬಾಸ್ ಸೀಸನ್ 10ರ ವಿಜೇತರಾದರು.
'ಡೊಳ್ಳು' ಸಿನಿಮಾ ಮೂಲಕ ತಮ್ಮ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರು.
ಕಾರ್ತಿಕ್ ಮಹೇಶ್ ಅವರು ಕೀನ್ಯಾದಲ್ಲಿ ಪ್ರವಾಸದಲ್ಲಿ ಸಫಾರಿ, ಫೋಟೊಗ್ರಫಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಗುರು ದೇಶಪಾಂಡೆ ನಿರ್ಮಾಣ ಮಾಡುತ್ತಿರುವ 'ರಾಮರಸ' ಚಿತ್ರದಲ್ಲಿ ಕಾರ್ತಿಕ್ ನಟಿಸಿದ್ದಾರೆ.
ಅರವಿಂದ್ ಕೆ ಪಿ ಕೂಡ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಅರವಿಂದ್ ಕೌಶಿಕ್ ನಿರ್ದೇಶನ 'ಅರ್ಧಂಬರ್ಧ ಪ್ರೇಮಕಥೆ' ಚಿತ್ರದಲ್ಲಿ ನಟಿ ದಿವ್ಯಾ ಉರುಡುಗ ಜತೆ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.