ADVERTISEMENT

ಜುಲೈ 16ರಂದು ಯಶ್‌ ಅಭಿನಯದ 'ಕೆಜಿಎಫ್ ಚಾಪ್ಟರ್–2' ತೆರೆಗೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 13:24 IST
Last Updated 29 ಜನವರಿ 2021, 13:24 IST
ಕೆಜಿಎಫ್‌ ಚಾಪ್ಟರ್‌–2 ಚಿತ್ರದ ಪೋಸ್ಟರ್– ಕೃಪೆ: ಹೊಂಬಾಳೆ ಫಿಲಂಸ್‌ ಟ್ವಿಟರ್‌ ಖಾತೆ
ಕೆಜಿಎಫ್‌ ಚಾಪ್ಟರ್‌–2 ಚಿತ್ರದ ಪೋಸ್ಟರ್– ಕೃಪೆ: ಹೊಂಬಾಳೆ ಫಿಲಂಸ್‌ ಟ್ವಿಟರ್‌ ಖಾತೆ   

ಬೆಂಗಳೂರು: ಕೆಜಿಎಫ್ ಚಾಪ್ಟರ್- 2 ಈ ವರ್ಷ ಜುಲೈ 16ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ.

ಬಹು ನಿರೀಕ್ಷಿತ ಕೆಜಿಎಫ್‌ ಚಾಪ್ಟರ್‌ –2 ಚಿತ್ರದ ಬಿಡುಗಡೆಯ ದಿನಾಂಕ ಶುಕ್ರವಾರ ಪ್ರಕಟವಾಗಿದೆ. ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಸಂಜೆ 6.32ಕ್ಕೆ ಮಾಹಿತಿ ಪ್ರಕಟಿಸಿದೆ.

ಮಕರ ಸಂಕ್ರಾಂತಿ ವೇಳೆಗೆ ಈ ಚಿತ್ರ ಬಿಡುಗಡೆ ಆಗುವ ಸುದ್ದಿ ಇತ್ತು. ಜನವರಿ 7ರಂದು ಯೂನಿವರ್ಸಲ್ ಟೀಸರ್ ಬಿಡುಗಡೆ ಆಗಿತ್ತು. ಚಿತ್ರವು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ADVERTISEMENT

ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್, ಬಹುಭಾಷಾ ನಟ ಪ್ರಕಾಶ್ ರೈ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

ಕೋವಿಡ್‌ನಿಂದಾಗಿ ಚಿತ್ರಮಂದಿರಗಳಲ್ಲಿ ಪೂರ್ಣ ಆಸನ ಭರ್ತಿಗೆ ಅವಕಾಶ ಇಲ್ಲದಿರುವುದು, ಕನ್ನಡ ಚಿತ್ರದ ತೆಲುಗು ಅವತರಣಿಕೆ ಬಿಡುಗಡೆಗೆ ಟಾಲಿವುಡ್‌ನಲ್ಲಿ ಅಡ್ಡಿ ಎದುರಾಗಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ತಡವಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರ ತಂಡದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.