
ಕಿಚ್ಚ ಸುದೀಪ್
ಎಕ್ಸ್ ಚಿತ್ರ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟನ ಲೋಕಕ್ಕೆ ಪ್ರವೇಶಿಸಿ ಇಂದಿಗೆ 30 ವರ್ಷಗಳು ಕಳೆದಿವೆ. ನೆಚ್ಚಿನ ನಟನ 30 ವರ್ಷಗಳ ಸಿನಿ ಪಯಣದ ಸಂಭ್ರಮವನ್ನು ಅಭಿಮಾನಿಗಳು ಸಡಗರದಿಂದ ಆಚರಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಕಿಚ್ಚ ಸುದೀಪ್ ಅವರ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡು ನಟನಿಗೆ ಶುಭ ಕೋರುತ್ತಿದ್ದಾರೆ.
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗದ ಜನಪ್ರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದು, ಅವರು ತಮ್ಮದೇ ಆದ ‘ಕಿಚ್ಚ ಕ್ರಿಯೇಷನ್ಸ್’ ಮೂಲಕ ‘ಮೈ ಆಟೋಗ್ರಾಫ್’, ‘ನಂ 73 ಶಾಂತಿನಿವಾಸ’, ‘ಜಿಗರ್ತಾಂಡ’, ‘ಮಾಣಿಕ್ಯ’, ಮತ್ತು ‘ಅಂಬಿ ನಿಂಗ್ ವಯಸ್ಸಾಯ್ತೋ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ.
ನಟ ಸುದೀಪ್
ಅದರ ಜೊತೆಗೆ ಸುದೀಪ್ ನಟನೆಯ ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗೆ ಸತತವಾಗಿ ಮೂರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ‘ಪೈಲ್ವಾನ್’ ಚಿತ್ರದ ನಟನೆಗೆ 2019ರ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆಯಾಗಿತ್ತು, ಆದರೆ ಸುದೀಪ್ ಅವರು ರಾಜ್ಯ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದರು. ವಿಕ್ರಾಂತ್ ರೋಣ, ಕೋಟಿಗೊಬ್ಬ 3, ಪೈಲ್ವಾನ್, ಕೆಂಪೇಗೌಡ, ವೀರ ಮದಕರಿ ಸೇರಿದಂತೆ ಅವರು ಪ್ರಮುಖ ಚಿತ್ರಗಳಾಗಿವೆ ನಟ ಸುದೀಪ್ ಅವರ 30 ವರ್ಷದ ಸಿನಿ ಪಯಣದಲ್ಲಿ 47 ಸಿನಿಮಾಗಲ್ಲಿ ನಟಿಸಿದ್ದಾರೆ
ಈ ವರ್ಷ ‘ಬಿಲ್ಲ ರಂಗ ಬಾಷಾ’ ತೆರೆಗೆ ಬರಬೇಕಿದೆ. ಈ ಬಗ್ಗೆ ಚಿತ್ರತಂಡ ಸಿನಿಮಾ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ನೀಡಬೇಕಿದೆ. ಸಿನಿಮಾಗಳ ಜೊತೆ ಜೊತೆಗೆ ಕಿಚ್ಚ ಸುದೀಪ್ ಅವರು ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 1ರಿಂದ 12ರವರೆಗೆ ನಿರೂಪಣೆ ಮಾಡುವ ಮೂಲಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಿನಿ ಪಯಣದಲ್ಲಿ ನಟನೆಯ ಜತೆಗೆ ಗಾಯಕರಾಗಿಯೂ ಸುದೀಪ್ ಗುರುತಿಸಿಕೊಂಡಿದ್ದಾರೆ
ಇನ್ನು, ಸುದೀಪ್ ಅವರ 30 ವರ್ಷಗಳ ಸಿನಿ ಸಂಭ್ರಮದ ನಿಮಿತ್ತ ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಹೆಸರಾಂತ ಕಲಾವಿದರು ಜ. 31ರ ಸಂಜೆ 6 ಗಂಟೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಿಡಿಪಿಯನ್ನ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ಈ ವಿಷಯವನ್ನು ಅಧಿಕೃತವಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.