ADVERTISEMENT

ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ: ದರ್ಶನ್ ಜತೆಗಿನ ಫೋಟೊಗೆ ಸುದೀಪ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಡಿಸೆಂಬರ್ 2025, 16:16 IST
Last Updated 24 ಡಿಸೆಂಬರ್ 2025, 16:16 IST
ಸುದೀಪ್‌
ಸುದೀಪ್‌   

ಬೆಂಗಳೂರು: ನಟ ಸುದೀಪ್‌ ನಟನೆಯ ‘ಮಾರ್ಕ್‌’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಸುದೀಪ್‌ ಅವರು ದರ್ಶನ್‌ ಬಗ್ಗೆ ‘ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ’ ಎಂದಿದ್ದಾರೆ. 

ಮಾರ್ಕ್‌ ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ #AskKichcha...ಎನ್ನುವ ಮೂಲಕ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. 

ಈ ವೇಳೆ ‘ಕಿರಾತಕ’ ಎನ್ನುವ ಎಕ್ಸ್‌ ಖಾತೆಯಲ್ಲಿ ಸುದೀಪ್‌ ಮತ್ತು ದರ್ಶನ್‌ ಅವರ ಫೋಟೊ ಶೇರ್ ಮಾಡಿ ‘ಇವರ ಬಗ್ಗೆ ಒಂದು ಪದ’ ಎಂದಿದ್ದಾರೆ. ಇದನ್ನು ಸುದೀಪ್‌ ಎಕ್ಸ್‌ ಖಾತೆಯಲ್ಲಿ ರೀಪೋಸ್ಟ್‌ ಮಾಡಿದ್ದು, ‘ಅವರಿಗೆ ಯಾವಾಗಲೂ ಶುಭ ಹಾರೈಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ. 

ADVERTISEMENT

ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್‌ ಉತ್ಸವದಲ್ಲಿ ಕಿಚ್ಚ ಸುದೀಪ್ ‘ಯುದ್ಧಕ್ಕೆ ಒಂದು ಪಡೆ ಸಿದ್ಧವಾಗಿದೆ’ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. 

ಕನ್ನಡ ಚಿತ್ರರಂಗದಲ್ಲಿ ‘ಸ್ಟಾರ್‌ ವಾರ್‌’ ಎನ್ನುವ ಸುದ್ದಿಗಳೂ ಹರಿದಾಡಿದ್ದವು. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರು ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಲೈವ್‌ ಬಂದು, ‘ಪೈರಸಿ ಮಾಡುವವರ ವಿರುದ್ಧದ ಹೋರಾಟವೇ ಹೊರತು ಯಾವುದೇ ನಟರ ಅಥವಾ ಅಭಿಮಾನಿಗಳ ವಿರುದ್ಧ ಅಲ್ಲ, ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತವೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.