ADVERTISEMENT

‘ಮಾರ್ಕ್’ ಚಿತ್ರದ ಆ್ಯಕ್ಷನ್‌ ಮೇಕಿಂಗ್ ಮೆಲುಕು ಹಾಕಿದ ನಟ ಕಿಚ್ಚ ಸುದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 10:38 IST
Last Updated 27 ಜನವರಿ 2026, 10:38 IST
   

ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಪವರ್‌ಪ್ಯಾಕ್ಡ್‌ ಆ್ಯಕ್ಷನ್‌ ಮೇಕಿಂಗ್ ಬಗ್ಗೆ ಪ್ರಿಯಾ ಸುದೀಪ್ ಒಡೆತನದ ‘ಸುಪ್ರಿಯಾನ್ವಿ’ ಎಕ್ಸ್ ಖಾತೆಯಲ್ಲಿ  ವಿಡಿಯೊ ಹಂಚಿಕೊಂಡಿದ್ದಾರೆ.

‘ಮಾರ್ಕ್’  ಚಿತ್ರದ ಆ್ಯಕ್ಷನ್‌ ಮೇಕಿಂಗ್ ಕುರಿತು ಮಾತನಾಡಿರುವ ನಟ ಕಿಚ್ಚ ಸುದೀಪ್, ‘ಸಿನಿಮಾದಲ್ಲಿಆ್ಯಕ್ಷನ್‌ ಇರಬೇಕು. ಈ ಚಿತ್ರದ ಆ್ಯಕ್ಷನ್‌ ದೃಶ್ಯ ಚಿತ್ರೀಕರಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರು ಸಣ್ಣ ಪುಟ್ಟಗಾಯವನ್ನು ಮಾಡಿಕೊಂಡಿದ್ದಾರೆ. ತುಂಬಾ ಜನ ಸಾಹಸ ನಿರ್ದೇಶಕರು ಸೇರಿ ಈ ಚಿತ್ರದ ಸಾಹಸ ದೃಶ್ಯಕ್ಕೆ ಕಾರಣರಾಗಿದ್ದಾರೆ. ‘ಮಾರ್ಕ್’ ಚಿತ್ರದ ಸೆಟ್,  ನೃತ್ಯ ನಿರ್ದೇಶನ ಹೀಗೆ ಪ್ರತಿಯೊಂದು ಕೆಲಸವು ಈ ಚಿತ್ರದ ಯಶಸ್ಸಿಗೆ ಕಾರಣವಾಗಿದೆ’ ಎಂದು ಚಿತ್ರೀಕರಣದ ಬಗ್ಗೆ ಕಿಚ್ಚ ಮೆಲುಕು ಹಾಕಿದ್ದಾರೆ.

ವಿಜಯ್ ಕಾರ್ತಿಕೇಯ ನಿರ್ದೇಶನದ   ‘ಮಾರ್ಕ್’  ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್, ಕಿಚ್ಚ ಕ್ರಿಯೆಷನ್ಸ್ ನಿರ್ಮಾಣ ಮಾಡಿದೆ. ಸುದೀಪ್, ನವೀನ್ ಚಂದ್ರ, ಶೈನ್ ಟಾಮ್ ಚಾಕೋ, ಗುರು ಸೋಮಸುಂದರಮ್, ಗೋಪಾಲಕೃಷ್ಣ ದೇಶಪಾಂಡೆ, ಯೋಗಿ ಬಾಬು, ರೋಶಿನಿ ಪ್ರಕಾಶ್ ಸೇರಿ ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಳೆದ ಡಿಸೆಂಬರ್ 25ರ ಕ್ರಿಸ್‌ಮಸ್‌  ಹಬ್ಬದಂದು ತೆರೆಕಂಡ ಚಿತ್ರವು, ಒಟಿಟಿ ಫ್ಲಾಟ್ ಫಾರಂ 'ಜಿಯೋ ಹಾಟ್‌ಸ್ಟಾರ್'ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT