ADVERTISEMENT

‘ಲವ್ ಒಟಿಪಿ’ ಚಿತ್ರಕ್ಕೆ ಪ್ರೇಕ್ಷಕರ ನೀರಸ ಪ್ರತಿಕ್ರಿಯೆ: ನಟ ಅನೀಶ್ ಭಾವುಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2025, 9:13 IST
Last Updated 15 ನವೆಂಬರ್ 2025, 9:13 IST
   

ನಟ ಅನೀಶ್ ತೇಜೇಶ್ವರ್ ನಟನೆಯ ‘ಲವ್ ಒಟಿಪಿ’ ಚಿತ್ರ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಈ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದ್ದರೂ ಚಿತ್ರಮಂದಿರದಲ್ಲಿ ಚಿತ್ರ ಯಶಸ್ಸು ಕಾಣುತ್ತಿಲ್ಲವೆಂದು ನಟ ಅನೀಶ್ ಭಾವುಕರಾಗಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಮಾತನಾಡಿರುವ ಅನೀಶ್, ನಿನ್ನೆ ಬಿಡುಗಡೆಯಾಗಿರುವ ‘ಲವ್ ಒಟಿಪಿ’ ಚಿತ್ರ ಕುರಿತು ತುಂಬಾ ನೋವಿನಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ. ಯಶಸ್ಸಿಗಾಗಿ ಚಿತ್ರರಂಗದಲ್ಲಿ 14ವರ್ಷದಿಂದ ನಿರಂತರ ಶ್ರಮ ಹಾಕುತ್ತಿದ್ದೇನೆ. ಸೋಲುಗಳಿಗೆ ಕಂಗೆಡದೆ ಸಾಧಿಸುವ ಛಲದಲ್ಲಿ ಇದ್ದೀನಿ. ನನ್ನ ಸಿನಿಮಾ ವೃತ್ತಿಯಲ್ಲೇ ಉತ್ತಮ ಅಭಿಪ್ರಾಯ ‘ಲವ್ OTP’ ಚಿತ್ರಕ್ಕೆ ಸಿಕ್ಕಿದೆ. ಆದರೆ ಜನ ಯಾಕೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿಲ್ಲ ಎಂದು ಅರ್ಥವಾಗುತ್ತಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.

‘ಪ್ರೇಕ್ಷಕರ ಗಮನ ಸೆಳೆಯಲು ಇನ್ನು ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ಇವತ್ತು, ನಾಳೆಯೊಳಗೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾವನ್ನು ನೋಡದೇ ಇದ್ದರೆ ಇದೇ ನನ್ನ ಕೊನೆಯ ಚಿತ್ರ ಆಗಲಿದೆ. ಈ ಕಣ್ಣೀರು ಸಿಂಪತಿಗಲ್ಲ.. ಗಿಮಿಕ್ಕಿಗೂ ಅಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.