
ಮುಂಬೈ : ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಸಾರಗೊಳ್ಳುವ 'Mrs. ದೇಶಪಾಂಡೆ' ವೆಬ್ ಸರಣಿಯಲ್ಲಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರು ಹಂತಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸತ್ಯಾನ್ವೇಷಣೆ, ಅಪರಾಧ ಆಧಾರಿತ ವೆಬ್ ಸರಣಿಯು ಡಿಸೆಂಬರ್ 19ರಂದು ಮೊದಲು ಪ್ರಸಾರ ಆಗಲಿದೆ. ಈ ವೆಬ್ ಸರಣಿಯನ್ನು ನಾಗೇಶ್ ಕುಕುನೂರ್ ನಿರ್ದೇಶನ ಮಾಡಿದ್ದು, ಅಪ್ಲಾಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದೆ.
ಸಾಮಾನ್ಯ ಮಹಿಳೆಯು ಹತ್ತಾರು ರಹಸ್ಯಗಳನ್ನು ಮುಚ್ಚಿಟ್ಟು ಜೀವನ ಸಾಗಿಸುತ್ತಿರುತ್ತಾಳೆ. ಸತ್ಯ ಹೊರಬಂದ ಬಳಿಕ ಆಕೆಯ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಹೇಳುವ ಕಥೆಯೆ Mrs. ದೇಶಪಾಂಡೆ ವೆಬ್ ಸರಣಿ.
'ಅದ್ಭುತ ಸಂಯಮ ಮತ್ತು ನಿಖರತೆಯೊಂದಿಗೆ ನಿರ್ಮಿಸಲಾಗಿದೆ. ಈ ವೆಬ್ ಸರಣಿಯು ನನನಗೆ ಸಂತಸದ ಪ್ರಯಾಣವಾಗಿದೆ. ನಟಿ ಮಾಧುರಿ ಅವರು ನಿರ್ವಹಿಸಿದ ಪಾತ್ರ ಸಂತೋಷವನ್ನುಂಟು ಮಾಡಿದೆ. ಮಾಧುರಿ ಪಾತ್ರವು ಪ್ರೇಕ್ಷಕರಿಗೆ ಕೂತೂಹಲ ಮೂಡಿಸುತ್ತದೆ. ಆರಂಭದಿಂದ ಕೊನೆಯವರೆಗೂ ವೆಬ್ ಸರಣಿಯನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ಪ್ರತಿ ಸಂಚಿಕೆಯಲ್ಲೂ ತಿರುವುಗಳಿವೆ. ಇಷ್ಟು ವರ್ಷದ ಪಾತ್ರಕ್ಕಿಂತ ಈ ವೆಬ್ ಸರಣಿಯಲ್ಲಿ ವಿಭಿನ್ನವಾಗಿ ನಟಿಸಿದ್ದಾರೆ’ ಎಂದು ನಿರ್ದೇಶಕ ನಾಗೇಶ್ ಕುಕುನೂರ್ ಹೇಳಿದ್ದಾರೆ.
ಈ ವೆಬ್ ಸರಣಿಯಲ್ಲಿ ಸಿದ್ಧಾರ್ಥ್ ಚಂದೇಕರ್ ಹಾಗೂ ಪ್ರಿಯಾಂಶು ಚಟರ್ಜಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.