ಒಂದು ಸಿನಿಮಾವೂ ಪ್ರೇಕ್ಷಕರ ಗಮನ ಸೆಳೆಯಲು ನಟನೆ ಮಾತ್ರವಲ್ಲದೇ ಚಿತ್ರಕಥೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಅನೇಕರು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಕನಸು ಕಂಡಿರುತ್ತಾರೆ. ಆದರೆ ಮಾರ್ಗದರ್ಶನದ ಕೊರತೆಯಿಂದ ಹಿಂದೆ ಸರಿಯವವರೆ ಹೆಚ್ಚು. ಚಿತ್ರಕಥೆ ಮೇಲೆ ಆಸಕ್ತಿ ಇರುವವರಿಗಾಗಿ ಲೇಖಕ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರಕಥೆ ಬರವಣಿಗೆ ಕುರಿತು ಕಾರ್ಯಾಗಾರ ನಡೆಸುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
ಚಿತ್ರಕಥೆ ಕಾರ್ಯಾಗಾರದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ‘ನಮ್ಮೆಲ್ಲರೊಳಗೂ ಕಥೆಗಳು ಇರುತ್ತವೆ. ಈ ಕಥೆಗಳನ್ನು ಚಿತ್ರಕಥೆ ಆಗಿ ಮಾಡುವುದು ಹೇಗೆ? ಹಿಂದೆಂದಿಗಿಂತಲೂ ಕೂಡ ನಮ್ಮ ಚಿತ್ರೋದ್ಯಮಕ್ಕೆ ಬರಹಗಾರರ ಅವಶ್ಯಕತೆ ಇದೆ. ಅದಕ್ಕಾಗಿಯೇ ನಮ್ಮ ‘ಟೆಂಟ್ ಸಿನಿಮಾ’ ಶಾಲೆಯಲ್ಲಿ ಚಿತ್ರಕಥೆ ರಚಿಸುವ ಕಾರ್ಯಗಾರ ನಡೆಸುತ್ತಿದ್ದೇವೆ. ಆಸಕ್ತಿ ಇರುವವರಿಗೆ ಚಿತ್ರಕಥೆ ಬಗ್ಗೆ ಕಲಿಸಿಕೊಡಲು ತುಂಬಾ ಉತ್ಸುಕನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
‘ಟೆಂಟ್ ಸಿನಿಮಾ’ ಶಾಲೆಯ ಕಾರ್ಯಾಗಾರದ ವಿವರ ಹೀಗಿದೆ…
ಕಾರ್ಯಾಗಾರವು ಜ.31ರಿಂದ ಆರಂಭವಾಗಿ ಫೆ. 1–2, ಹಾಗೂ ಫೆ. 6–8 ಇರಲಿದೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಅವರ ತಂಡ ಕಾರ್ಯಾಗಾರ ನಡೆಸಿಕೊಡುತ್ತಿದೆ. ಬೆಂಗಳೂರಿನ ನಾಗತಿಹಳ್ಳಿ ಸ್ಕೂಲ್ ಆಫ್ ಸಿನೆಮಾದಲ್ಲಿ ಕಾರ್ಯಾಗಾರ ಆಯೋಜನೆಗೊಂಡಿದ್ದು, ₹15, 000.ಶುಲ್ಕ ಇರಲಿದೆ ಎಂದು ತಂಡ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.