ನಟ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ್ದಾರೆ. ಈ ಕ್ಷಣವನ್ನು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಪ್ರೇಮ್ ಅವರ ಪತ್ನಿ ಜ್ಯೋತಿ, ‘ನನ್ನ ರಾಜಕುಮಾರನಿಗೆ ಶುಭವಾಗಲಿ. ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ‘ ಎಂದು ಬರೆದು ಶುಭಹಾರೈಸಿದ್ದಾರೆ.
ನಟ ಪ್ರೇಮ್ ಅವರು 2000ರಲ್ಲಿ ‘ಪ್ರಾಣ‘ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಈ ಚಿತ್ರ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. 2005ರಲ್ಲಿ ಬಿಡುಗಡೆಗೊಂಡ ‘ನೆನಪಿರಲಿ’ ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಆ ಬಳಿಕ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಗುಣವಂತ’, ‘ಜೊತೆ ಜೊತೆಯಲಿ’, ‘ಚಾರ್ಮಿನಾರ್’, ‘ಪಲ್ಲಕ್ಕಿ’, ‘ಚೌಕ’,‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಇವರ ನಟನೆಯ ‘ಓ ಗುಣವಂತ’.. ‘ತುರ್ತಿನಲ್ಲಿ ಗೀಚಿದ’.. ‘ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ’, ‘ಒಲವು ಒಂಟಿಯಲ್ಲ’.. ‘ಇಂದು ಬಾನಿಗೆಲ್ಲ ಹಬ್ಬ’ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ.
ಸದ್ಯ, ಪ್ರೇಮ್ ಅವರು ಸ್ಪಾರ್ಕ್, ಡಿಡಿಢಿಕ್ಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರ ಪುತ್ರಿ ಅಮೃತಾ ಪ್ರೇಮ್ ಅವರು ‘ಟಗರು ಪಲ್ಯ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸದ್ಯ ಧೀರೇನ್ ಆರ್. ರಾಜ್‌ಕುಮಾರ್ ಅವರ ಜೊತೆ ಪಬ್ಬಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.