ADVERTISEMENT

ಆಲಿಯಾ -ರಣಬೀರ್ ಮದುವೆಗೆ 1 ತಿಂಗಳು: ಹೊಸ ಫೋಟೊ ಹಂಚಿಕೊಂಡ ಬಾಲಿವುಡ್ ಬೆಡಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2022, 9:06 IST
Last Updated 14 ಮೇ 2022, 9:06 IST
ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ (ಇನ್‌ಸ್ಟಾಗ್ರಾಮ್ ಚಿತ್ರ)
ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ (ಇನ್‌ಸ್ಟಾಗ್ರಾಮ್ ಚಿತ್ರ)   

ಮುಂಬೈ: ಬಾಲಿವುಡ್‌ನ ಕ್ಯೂಟ್ ಜೋಡಿ ಎಂದೇ ಹೆಸರಾಗಿರುವ ಆಲಿಯಾ ಭಟ್‌ ಮತ್ತು ರಣಬೀರ್ ಕಪೂರ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಫೋಟೊವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಈ ಜೋಡಿ, ಹಬ್ಬ, ಸಮಾರಂಭ, ಪ್ರವಾಸದ ವೇಳೆ ಕ್ಲಿಕ್ಕಿಸಿದ ಫೋಟೊಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ.

ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಮೇ 14ಕ್ಕೆ ಒಂದು ತಿಂಗಳಾಗಿದೆ. ಈ ವಿಶೇಷ ದಿನವನ್ನು ಗುರುತಿಸಲು, ಆಲಿಯಾ ತನ್ನ ಪತಿಯೊಂದಿಗೆ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿ ಏ.14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು.

ಓದಿ...ರಿಯಾಲಿಟಿ ಶೋ ಕೊರಿಯೊಗ್ರಾಫರ್ ಟೀನಾ ಸಿಧು ಅನುಮಾನಾಸ್ಪದ ಸಾವು

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನ ಹಾಗೂ ಆಲಿಯಾ ಭಟ್ ಪ್ರಧಾನ ಭೂಮಿಕೆಯಲ್ಲಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎಸ್‌.ಎಸ್‌.ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಆರ್‌ಆರ್‌ಆರ್‌’ ಚಿತ್ರದಲ್ಲೂ ಆಲಿಯಾ ಕಾಣಿಸಿಕೊಂಡಿದ್ದರು.

ಅಯಾನ್ ಮುಖರ್ಜಿ ಆ್ಯಕ್ಷನ್ ಕಟ್ ಹೇಳಿರುವ ‘ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಒಟ್ಟಿಗೆ ಅಭಿನಯಿಸುತ್ತಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.