ADVERTISEMENT

OTT Release: ಈ ವಾರ ಕಾಂತಾರ, ಇಡ್ಲಿ ಕಡೈ ಸೇರಿ ಪ್ರಮುಖ ಸಿನಿಮಾಗಳು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2025, 12:48 IST
Last Updated 27 ಅಕ್ಟೋಬರ್ 2025, 12:48 IST
<div class="paragraphs"><p>ನಟ ಧನುಷ್, ರಿಷಬ್ ಶೆಟ್ಟಿ,&nbsp;ಜಾಹ್ನವಿ ಕಪೂರ್</p></div>

ನಟ ಧನುಷ್, ರಿಷಬ್ ಶೆಟ್ಟಿ, ಜಾಹ್ನವಿ ಕಪೂರ್

   

ಚಿತ್ರ: ಇನ್‌ಸ್ಟಾಗ್ರಾಮ್

ಈ ವಾರ ಒಟಿಟಿಯ ವೇದಿಕೆಗಳಲ್ಲಿ ಹಲವು ಹೊಸ ಸಿನಿಮಾಗಳು ತೆರೆ ಕಾಣುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ, ಹಾರರ್ ಥ್ರಿಲ್ಲರ್ ಸೇರಿದಂತೆ ಹಲವು ಸಿನಿಮಾಗಳು ಅಕ್ಟೋಬರ್ 27ರಿಂದ ನವೆಂಬರ್ 2ರ ಅವಧಿಯಲ್ಲಿ ಒಟಿಟಿಯಲ್ಲಿ ತೆರೆ ಕಾಣಲಿವೆ.

ADVERTISEMENT

ಕಾಂತಾರ ಚಾಪ್ಟರ್ 1

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಅ. 2ರಂದು ಬಿಡುಗಡೆಯಾಗಿ ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರವಾಗಲಿದೆ.

ಎಲ್ಲಿ ನೋಡಬಹುದು: ಅಮೆಜಾನ್ ಪ್ರೈಮ್

ಭಾಷೆ: ಕನ್ನಡ ಮತ್ತು ಇತರೆ

ಬಿಡುಗಡೆ: ಅ.31

ಪರಮ ಸುಂದರಿ

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಜಾನ್ವಿ ಕಪೂರ್ ಅಭಿನಯದ ‘ಪರಮ ಸುಂದರಿ’ ಸಿನಿಮಾ ಆಗಸ್ಟ್ 29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇದೀಗ ಪರಮ ಸುಂದರಿ ಸಿನಿಮಾ ಒಟಿಟಿಗೆ ಲಗ್ಗೆ ಇಡಲಿದೆ. ಚಿತ್ರಮಂದಿರದಲ್ಲಿ ಈ ರೊಮ್ಯಾಂಟಿಕ್ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.

ಎಲ್ಲಿ ನೋಡಬಹುದು: ಅಮೆಜಾನ್ ಪ್ರೈಮ್ ವಿಡಿಯೊ

ಭಾಷೆ: ಹಿಂದಿ

ಬಿಡುಗಡೆ: ಅ.23

ಇಡ್ಲಿ ಕಡೈ

ತಮಿಳು ನಟ ಧನುಷ್ ಹಾಗೂ ನಿತ್ಯಾ ಮೆನನ್ ನಟನೆಯ 'ಇಡ್ಲಿ ಕಡೈ' ಸಿನಿಮಾ ಅ. 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈಗ ಈ ಚಿತ್ರವು ಒಟಿಟಿಗೆ ಪ್ರವೇಶ ಮಾಡುತ್ತಿದೆ. ಇಡ್ಲಿ ಕಡೈ ಒಟಿಟಿಗೆ ಬರುವ ಕುರಿತು ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರವನ್ನು ಡಾನ್ ಪಿಕ್ಚರ್ಸ್ ಮತ್ತು ವಂಡರ್ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆಕಾಶ್ ಭಾಸ್ಕರನ್ ಅವರು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ.

ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್‌

ಭಾಷೆ: ತಮಿಳು ಮತ್ತು ಇತರೆ

ಬಿಡುಗಡೆ: ಅ.29

ಮಾರಿಗಲ್ಲು

ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಕನಸಿನ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ 'ಮಾರಿಗಲ್ಲು' ವೆಬ್ ಸೀರಿಸ್‌ನ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಮಾರಿಗಲ್ಲು ವೆಬ್ ಸೀರೀಸ್ ಒಟಿಟಿಗೆ ಪ್ರವೇಶಿಸಲಿದೆ.

ಎಲ್ಲಿ ನೋಡಬಹುದು: ಜೀ5

ಭಾಷೆ: ಕನ್ನಡ ಮತ್ತು ಇತರೆ

ಬಿಡುಗಡೆ: ಅ.31

ಲೋಕಃ ಚಾಪ್ಟರ್ 1

ಕಲ್ಯಾಣಿ ಪ್ರಿಯದರ್ಶನ್ ಅವರು ನಟಿಸಿರುವ ‘ಲೋಕಃ ಚಾಪ್ಟರ್ 1’ ಸಿನಿಮಾ ಆಗಸ್ಟ್ 28ರಂದು ಬಿಡುಗಡೆಯಾಗಿತ್ತು. ದುಲ್ಖರ್ ಸಲ್ಮಾನ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ದುಲ್ಖರ್, ಟುವಿನೋ ಥಾಮಸ್ ಸೇರಿದಂತೆ ಅನೇಕರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರ ಒಟಿಟಿಗೆ ಲಗ್ಗೆ ಇಟ್ಟಿದೆ.

ಎಲ್ಲಿ ನೋಡಬಹುದು: ಜಿಯೋ ಹಾಟ್​ಸ್ಟಾರ್

ಭಾಷೆ: ಮಲಯಾಳಂ ಮತ್ತು ಇತರೆ

ಬಿಡುಗಡೆ: ಅ.31

ಜಂಬೂ ಸರ್ಕಸ್

ಎಂ.ಡಿ. ಶ್ರೀಧರ್ ನಿರ್ದೇಶನದ ‘ಜಂಬೂ ಸರ್ಕಸ್’ ಸಿನಿಮಾ ಆಗಸ್ಟ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಪ್ರವೀಣ್ ತೇಜ್, ಅಂಜಲಿ, ಅಚ್ಯುತ್ ಕುಮಾರ್, ಅವಿನಾಶ್ ನಟಿಸಿದ್ದ ಈ ಸಿನಿಮಾ ಇದೀಗ ಈ ಸಿನಿಮಾ​ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ.

ಎಲ್ಲಿ ನೋಡಬಹುದು: ಸನ್​​ ನೆಕ್ಸ್ಟ್

ಭಾಷೆ: ಕನ್ನಡ ಮತ್ತು ಇತರೆ

ಬಿಡುಗಡೆ: ಅ.24

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.