ಬೆಂಗಳೂರು: ಬಡಿಗೇರ್ ದೇವೇಂದ್ರ ನಿರ್ದೇಶನದ ‘ವನ್ಯ’ ಸಿನಿಮಾವು 24ನೇ ಪುಣೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರದರ್ಶನಗೊಂಡಿದೆ.
ಈ ಚಿತ್ರೋತ್ಸವಕ್ಕೆ ದೇಶ ವಿದೇಶಗಳಿಂದ 1,200 ಸಿನಿಮಾಗಳು ಬಂದಿದ್ದು, ಇಂಡಿಯನ್ ಸಿನಿಮಾ ವಿಭಾಗದಲ್ಲಿ ‘ವನ್ಯ’ ಕನ್ನಡದಿಂದ ಆಯ್ಕೆಯಾದ ಏಕೈಕ ಚಿತ್ರವಾಗಿದೆ.
ಶುಕ್ರವಾರ (ಜ.16) ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಸಿನಿಮಾ, ಸೋಮವಾರ(ಜ.19) ಮತ್ತೆ ಪ್ರದರ್ಶನಗೊಳ್ಳಲಿದೆ.
ತಾನಿದ್ದ ಕಾಡಿನಲ್ಲಿಯೇ ಉಳಿಯಲು ಒಬ್ಬ ವೃದ್ದ ನಡೆಸುವ ಹೋರಾಟದ ಕಥೆಯನ್ನು ‘ವನ್ಯ’ ಚಿತ್ರ ಒಳಗೊಂಡಿದೆ.
ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಬಡಿಗೇರ ದೇವೇಂದ್ರ, ಕಾರ್ಯಕಾರಿ ನಿರ್ಮಾಪಕ ಪ್ರಯಾಗ ಹೊದಿಗೆರೆ, ಕಲಾವಿದರಾದ ಯಶ್ವವಂತ ಕುಚಬಾಳ, ಶಂಕರ ಪಾಗೋಜಿ ಅವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.