ADVERTISEMENT

ಅಲ್ಲಿ ಇಂದಿಗೂ ಅಪ್ಪು ಭಾವಚಿತ್ರಕ್ಕೆ ಪೂಜಿಸುತ್ತಾರೆ:‘ರಣವಿಕ್ರಮ’ ನಿರ್ದೇಶಕ ಪವನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 9:08 IST
Last Updated 10 ಡಿಸೆಂಬರ್ 2025, 9:08 IST
   

ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ‘ರಣವಿಕ್ರಮ‘ ನಿರ್ದೇಶಕ ಪವನ್ ಒಡೆಯರ್ ಅವರು ಅಪ್ಪು ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

ಪುನೀತ್ ರಾಜ್‌ಕುಮಾರ್ ಜತೆಗಿನ ಒಡನಾಟವನ್ನು ಹಂಚಿಕೊಂಡಿರುವ ನಿರ್ದೇಶಕ ಪವನ್ ಒಡೆಯರ್ ಅವರು,  ‘ರಣವಿಕ್ರಮ‘ ಚಿತ್ರೀಕರಣ ಸಂದರ್ಭದಲ್ಲಿ ಅಪ್ಪು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆ ವೇಳೆ ಚಿತ್ರೀಕರಣಕ್ಕೆ ತೊಂದರೆಯಾಗುತ್ತದೆ ಎಂದು ಚಿತ್ರತಂಡ ಜನರ ಮನವೋಲಿಸಲು ಎಷ್ಟು ಪ್ರಯತ್ನಿಸಿದ್ರೂ ಅಭಿಮಾನಿಗಳು ಮಾತು ಕೇಳುತ್ತಿರಲಿಲ್ಲ. ಆದರೆ ಅಪ್ಪು ಅವರು ಮೈಕ್‌ನಲ್ಲಿ ಅಭಿಮಾನಿಗಳಿಗೆ  ಒಂದು ಮಾತು ಹೇಳಿದ್ರೆ.. ಬದಿಗೆ ಸರಿದು ಚಿತ್ರೀಕರಣಕ್ಕೆ ಸಹಕರಿಸುತ್ತಿದ್ದರು’ ಎಂದು ಪುನೀತ್ ರಾಜ್‌ಕುಮಾರ್  ಹಾಗೂ ಅಭಿಮಾನಿಗಳ ನಂಟಿನ ಬಗ್ಗೆ ಪವನ್ ಒಡೆಯರ್ ಹೇಳಿಕೊಂಡಿದ್ದಾರೆ.

ಗಡಿಭಾಗದ ಜಿಲ್ಲೆಗಳಲ್ಲಿ  'ರಣವಿಕ್ರಮ’ ಚಿತ್ರೀಕರಣ ಮಾಡಿದ್ದೇವು.  ಆ ಭಾಗದ ಅನೇಕರ ಮನೆಗಳಲ್ಲಿ ಇಂದಿಗೂ ಅಪ್ಪು ಅವರ ಭಾವಚಿತ್ರವನ್ನು ಇಟ್ಟು ಪೂಜಿಸುತ್ತಾರೆ. ‘ಕೆಲವರು ಬದುಕಿ ಅಳಿಯುತ್ತಾರೆ. ಇನ್ನೂ ಹಲವರು ಅಳಿದು ಉಳಿಯುತ್ತಾರೆ. ಆದರೆ ಅಪ್ಪು ಮಾತ್ರ..  ಶಾಶ್ವತವಾಗಿ ನಮ್ಮಲೇ ಇರುತ್ತಾರೆ‘ ಎಂದು ಪವನ್ ಒಡೆಯರ್  ಪುನೀತ್ ರಾಜ್‌ಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.