
ಪುನೀತ್ ರಾಜಕುಮಾರ್ ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ದಿನದಂದು ಪಿಆರ್‌ಕೆ ಆ್ಯಪ್ ಅನ್ನು ಪತ್ನಿ ಅಶ್ವಿನಿ ಅವರು ಅಧಿಕೃತವಾಗಿ ಲೋಕಾರ್ಪಾಣೆ ಮಾಡಿದ್ದಾರೆ. ಈ ಆ್ಯಪ್‌ನಲ್ಲಿ ಪುನೀತ್ ರಾಜಕುಮಾರ್ ಅವರ ಜೀವನ, ಸಾಧನೆ, ಸಿನಿ ತಾರೆಯರ ಜತೆಗಿನ ಒಡನಾಟವನ್ನು ನಿರೂಪಕಿ ಅನುಶ್ರೀ ಅವರು ನಡೆಸಿಕೊಡುವ ಸಂದರ್ಶನದ ಮೂಲಕ ಕಣ್ತುಂಬಿಕೊಳ್ಳಬಹುದು.
ಪಿಆರ್‌ಕೆ ಆ್ಯಪ್ ಸಂದರ್ಶನದಲ್ಲಿ ಮಾತನಾಡಿದ ಪುನೀತ್ ಪತ್ನಿ ಅಶ್ವಿನಿಯವರು, ‘ನಮ್ಮ ಅಪ್ಪನಿಗೆ ಅಣ್ಣಾವ್ರ ಕುಟುಂಬದ ಮೇಲೆ ಅಗಾಧ ಗೌರವ ಇತ್ತು. ಅವರು ಚಿತ್ರರಂಗದವರು ಎನ್ನುವ ಕಾರಣಕ್ಕೆ ನನ್ನ ಹಾಗೂ ಅಪ್ಪು ಅವರ ಪ್ರೀತಿಯನ್ನು ನಮ್ಮ ಮನೆಯಲ್ಲಿ ಒಪ್ಪಿರಲಿಲ್ಲ. ಅದರ ಬದಲಾಗಿ ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರನ್ನು ಮದುವೆಯಾಗಲು ಮನೆಯಲ್ಲಿ ಪ್ರಸ್ತಾಪಿಸಿದ್ದರು. ಆದರೆ ಆ ಪ್ರಸ್ತಾವನೆಯನ್ನು ನಾನೇ ತಿರಸ್ಕರಿಸಿದೆ' ಎಂದು ಅಶ್ವಿನಿ ಅವರು ಹೇಳಿದ್ದಾರೆ.
‘ಕೆಲವು ತಿಂಗಳ ನಂತರ ಪಾರ್ವತಮ್ಮ ರಾಜ್‌ಕುಮಾರ್ ಅವರು ಕುಟುಂಬದ ಜತೆ ನಮ್ಮ ಮನೆಗೆ ಬಂದು, ಹೂ ಮುಡಿಸುವ ಶಾಸ್ತ್ರ ಮಾಡಿದ್ದರು. ಅಪ್ಪು ಜತೆ ನನ್ನ ಮದುವೆ ಮಾಡುವುದಾಗಿ ಹೇಳಿ ಬೆಂಗಳೂರಿಗೆ ಹೋದರು’. ಆ ದಿನಗಳ ನೆನಪನ್ನು ಅಶ್ವಿನಿ ಅವರು ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.