ADVERTISEMENT

ರಾಕಿ ಭಾಯ್‌ಗೆ ಸಲಾಂ ಎಂದ ಅಲ್ಲು ಅರ್ಜುನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 10:41 IST
Last Updated 22 ಏಪ್ರಿಲ್ 2022, 10:41 IST
ಅಲ್ಲು ಅರ್ಜುನ್ ಮತ್ತು ಯಶ್
ಅಲ್ಲು ಅರ್ಜುನ್ ಮತ್ತು ಯಶ್   

ಕೆಜಿಎಫ್ ಚಾಪ್ಟರ್‌–2 ಸಿನಿಮಾಕ್ಕೆ ಯಶ್ ಅಭಿಮಾನಿಗಳು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರೋದ್ಯಮದ ಗಣ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪುಷ್ಪಾ ಸಿನಿಮಾದ ಹೀರೊ ಅಲ್ಲು ಅರ್ಜುನ್ ಸಹ ಕೆಜಿಎಫ್–2 ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಯಶ್ ನಟನೆಯನ್ನು ಶ್ಲಾಘಿಸಿದ್ದಾರೆ.

‘ಕೆಜಿಎಫ್–2ಗೆ ಅಭಿನಂದನೆಗಳು. ಯಶ್ ಅವರಿಂದ ಅದ್ಭುತ ನಟನೆ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಹಾಗೂ ಇತರರಿಂದ ಗಮನ ಸೆಳೆಯುವಂತಹ ನಟನೆ. ಅತ್ಯುತ್ತಮ ಚಿತ್ರೀಕರಣ. ಎಲ್ಲ ತಂತ್ರಜ್ಞರಿಗೂ ಅಭಿನಂದನೆಗಳು. ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ. ಅತ್ಯುತ್ತಮ ಸಿನಿಮಾ ಅನುಭವ ನೀಡಿದ್ದಕ್ಕಾಗಿ ಮತ್ತು ಭಾರತೀಯ ಸಿನಿಮಾ ಉತ್ತುಂಗದಲ್ಲಿ ಕಾಣಿಸುವಂತೆ ಮಾಡಿದ್ದಕ್ಕಾಗಿ ಧನ್ಯವಾದಗಳು’ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

ಕೆಜಿಎಫ್‌ ಚಾಪ್ಟರ್‌ 2 ಚಿತ್ರವು ಹಲವು ದಾಖಲೆಗಳನ್ನು ಬರೆದಿದೆ. ಜಗತ್ತಿನಾದ್ಯಂತ 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರವು ₹700 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಚಿತ್ರದ ಹಿಂದಿ ಆವೃತ್ತಿ ಈಗಾಗಲೇ ₹268 ಕೋಟಿ ಗಳಿಸಿದೆ ಎಂದು ಸಿನಿಮಾ ವಹಿವಾಟು ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.