ADVERTISEMENT

'ಸ್ತನಗಳ ಗಾತ್ರ ಹೆಚ್ಚಿಸಿಕೊಳ್ಳಿ': ಮುಜುಗರದ ಅನುಭವಗಳನ್ನು ತೋಡಿಕೊಂಡ ನಟಿ ರಾಧಿಕಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 6:27 IST
Last Updated 12 ಜೂನ್ 2022, 6:27 IST
ರಾಧಿಕಾ ಅಪ್ಟೆ
ರಾಧಿಕಾ ಅಪ್ಟೆ   

ಬಾಲಿವುಡ್‌ ಕರಾಳ ಮುಖವನ್ನು ನಟಿ ರಾಧಿಕಾ ಅಪ್ಟೆ ಬಯಲಿಗೆಳೆದಿದ್ದಾರೆ. ಕೆಲವರು ಹೊಸದಾಗಿ ಬರುವ ನಟಿಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದನ್ನು ಹೇಳಿದ್ದಾರೆ.

ರಾಧಿಕಾ ನಟಿಸಿರುವ ‘ಫಾರನ್ಸಿಕ್‘ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರುಬಾಲಿವುಡ್‌ ಕರಾಳ ಸತ್ಯವನ್ನು ತಿಳಿಸಿದ್ದಾರೆ.

ನಾನು ಸಿನಿಮಾರಂಗ ಪ್ರವೇಶ ಮಾಡಿದಾಗ ತುಂಬಾ ಒತ್ತಡದಲ್ಲಿದ್ದೆ. ಅವಕಾಶ ನೀಡುವುದಾಗಿ ಹೇಳಿ ಹಲವು ಸಲಹೆಗಳನ್ನು ನೀಡುತ್ತಿದ್ದರು ಎಂದು ಹೇಳಿದ್ದಾರೆ.

ADVERTISEMENT

ಮೂಗು, ಕಾಲು, ಗಲ್ಲ ಸೇರಿದಂತೆ ದೇಹದ ವಿವಿಧ ಭಾಗಗಳಿಗೆಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಬೇಕು. ನಿಮ್ಮ ಸ್ತನಗಳು ಚಿಕ್ಕದಾಗಿದ್ದು, ಗ್ರಾತ್ರ ಹೆಚ್ಚಿಸಿಕೊಳ್ಳಬೇಕು ಎಂದು ಹಲವರು ಹೇಳಿದ್ದರು. ಬಾಲಿವುಡ್‌ನಲ್ಲಿ ಹೆಣ್ಣು ಮಕ್ಕಳನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಸೌಂದರ್ಯದ ಹೆಸರಿನಲ್ಲಿ ನಟಿಯರ ದಾರಿ ತಪ್ಪಿಸಲಾಗುತ್ತಿದೆ ಎಂದು ರಾಧಿಕಾ ದೂರಿದ್ದಾರೆ.

ಮೊದಲು ಚಿತ್ರರಂಗ ಪ್ರವೇಶ ಮಾಡಿದಾಗ ನನ್ನ ಸೌಂದರ್ಯದ ಬಗ್ಗೆ ತೀರಾ ಕೀಳಾಗಿ ಮಾತನಾಡುತ್ತಿದ್ದರು, ದೇಹದ ವಿವಿಧ ಭಾಗಗಳ ಸರ್ಜರಿಬಗ್ಗೆ ಸಲಹೆ ನೀಡುತ್ತಿದ್ದರು.ಅಲ್ಲದೇ ನನ್ನ ಮೇಲೆ ಸಾಕಷ್ಟು ಒತ್ತಡಗಳನ್ನೂ ಹಾಕಲಾಗಿತ್ತು. ತಮಗಾಗಿರುವ ಮುಜುಗರದ ಅನುಭವಗಳನ್ನು ರಾಧಿಕಾ, ‘ಫಾರನ್ಸಿಕ್‘ ಸಿನಿಮಾ ಪ್ರಚಾರ ಕಾರ್ಯಕ್ರದಲ್ಲಿ ಹೇಳಿಕೊಂಡಿದ್ದಾರೆ.

ರಾಧಿಕಾಅಪ್ಟೆ ಸದ್ಯ ಫಾರನ್ಸಿಕ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಚಿತ್ರವು ಜೂನ್ 23ರಂದು ಜಿ5 ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ, ವಿಕ್ರಾಂತ್‌ ಮೆಸ್ಸಿ, ಪ್ರಾಚಿ ಸಾವಂತ್ ಸಹ ನಟಿಸಿದ್ದಾರೆ.

2016ರಲ್ಲಿ ಬಿಡುಗಡೆಯಾದ ‘ಪಾರ್ಡ್ಚ್‘ ಸಿನಿಮಾದಿಂದ ನಗ್ನ ವಿಡಿಯೊ ಲೀಕ್ ಆಗಿ ರಾಧಿಕಾ ವಿವಾದಕ್ಕೀಡಾಗಿದ್ದರು. ನಂತರ 2017ರಲ್ಲಿ ಕ್ಲೀನ್ ಶೇವ್ ಸಿನಿಮಾದ ನಗ್ನ ವಿಡಿಯೊ ಸಹ ಲೀಕ್ ಆಗಿತ್ತು. ಆಗ ಅವರು ಆ ದೃಶ್ಯದಲ್ಲಿ ಇರುವುದು ನಾನಲ್ಲಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.