ADVERTISEMENT

ಯೋಗ ವಿಡಿಯೊ ಪೋಸ್ಟ್ ಮಾಡಿ ಟ್ರೋಲ್‌ಗೆ ಸಿಲುಕಿದ ರಾಖಿ ಸಾವಂತ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2021, 10:06 IST
Last Updated 10 ಜೂನ್ 2021, 10:06 IST
ರಾಖಿ ಸಾವಂತ್
ರಾಖಿ ಸಾವಂತ್   

ಬೆಂಗಳೂರು: ಸಿನಿಮಾ ಮತ್ತು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ವಿವಾದದ ಮೂಲಕವೇ ಸುದ್ದಿಯಲ್ಲಿರುವ ನಟಿ ರಾಖಿ ಸಾವಂತ್ ಈಗ ಯೋಗ ಮಾಡುತ್ತಿದ್ದಾರೆ.

ಯೋಗ ಮಾಡುತ್ತಿರುವ ವಿಡಿಯೊ ಅನ್ನು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ನಟಿ ರಾಖಿ ಸಾವಂತ್ ಪೋಸ್ಟ್ ಮಾಡಿದ್ದು, ಅದಕ್ಕೆ ಸಾವಿರಾರು ಲೈಕ್ಸ್ ಮತ್ತು ಕಮೆಂಟ್ಸ್ ಬಂದಿದೆ.

ಆದರೆ ರಾಖಿಯ ಯೋಗ ನೋಡಿದ ಹಲವರು ಗುಡ್ ಎಂದರೆ ಮತ್ತೆ ಕೆಲವರು ಟ್ರೋಲ್ ಮಾಡಿದ್ದಾರೆ. ರಾಖಿಯ ಫಿಟ್ನೆಸ್ ವರ್ಕೌಟ್‌ನಲ್ಲಿ ಏನೂ ತಪ್ಪಿಲ್ಲದಿದ್ದರೂ, ಟ್ರೋಲಿಗರು ಮಾತ್ರ ಆಕೆ ಹಾಕಿಕೊಂಡಿರುವ ಬಟ್ಟೆಯ ಬಣ್ಣವನ್ನು ಟ್ರೋಲ್ ಮಾಡಿದ್ದಾರೆ.

ADVERTISEMENT

ರಾಖಿ ತನ್ನ ಸಾಮಾಜಿಕ ತಾಣಗಳ ಖಾತೆಗಳಲ್ಲಿ ಪ್ರತಿ ಬಾರಿ ಏನಾದರೊಂದು ಪೋಸ್ಟ್ ಹಾಕಿದಾಗಲೂ ಅದರಲ್ಲಿ ವಿವಾದ ಸೃಷ್ಟಿಯಾಗುತ್ತದೆ. ಅದರಂತೆ ಈ ಬಾರಿ ಯೋಗ ಮಾಡುವಾಗ ರಾಖಿ ಧರಿಸಿರುವ ಬಟ್ಟೆ, ಮೈಬಣ್ಣವನ್ನೇ ಹೋಲುತ್ತಿದೆ ಎಂದು ಕಮೆಂಟ್ ಮೂಲಕ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.