ADVERTISEMENT

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಹಾಡು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ನವೆಂಬರ್ 2025, 7:10 IST
Last Updated 8 ನವೆಂಬರ್ 2025, 7:10 IST
<div class="paragraphs"><p>ನಟ ರಾಮ್ ಚರಣ್</p></div>

ನಟ ರಾಮ್ ಚರಣ್

   

ಚಿತ್ರ ಕೃಪೆ: @AlwaysRamCharan

ತೆಲುಗಿನ ಖ್ಯಾತ ನಟ ರಾಮ್ ಚರಣ್ ಹಾಗೂ ಬಾಲಿವುಡ್ ನಟಿ ಜಾನ್ವಿ ಕಪೂರ್ ನಟನೆಯ ‘ಪೆದ್ದಿ’ ಚಿತ್ರದ ‘ಚಿಕ್ರಿ ಚಿಕ್ರಿ’ ಎಂಬ ಹಾಡು ಬಿಡುಗಡೆಯಾಗಿದೆ. ಒಂದೇ ದಿನದಲ್ಲಿ 2.96 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.

ADVERTISEMENT

ಬಿಡುಗಡೆಯಾದ ಹಾಡಿನಲ್ಲಿ ರಾಮ್ ಚರಣ್ ಅವರು ಸಿಗ್ನೆಚರ್ ಸ್ಟೆಪ್ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಪೆದ್ದಿ’ ಚಿತ್ರವು ವಿಶ್ವದಾದ್ಯಂತ 2026ರ ಮಾರ್ಚ್.27ರಂದು ತೆರೆ ಕಾಣಲಿದೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶನ ಮಾಡಿದ್ದು, ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ.

ಜಾಹ್ನವಿ ಕಪೂರ್, ಶಿವರಾಜ್‌ಕುಮಾರ್, ಜಗಪತಿ ಬಾಬು ಮತ್ತು ದಿವ್ಯಂದು ಅವರು 'ಪೆದ್ದಿ' ಸಿನಿಮಾದಲ್ಲಿ ನಟಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಆರ್. ರತ್ನವೇಲು ಛಾಯಾಗ್ರಹಣ ಮಾಡಿದ್ದಾರೆ.

ರಾಮ್ ಚರಣ್ ಅವರು 'ಆರ್‌ಆರ್‌ಆ‌ರ್', 'ಎವಡು', 'ಮಗಧೀರ', 'ಧ್ರುವ' ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.