ADVERTISEMENT

ಚೇತನ್ ಭಗತ್ ಕಾದಂಬರಿಯಂತಿದೆ ನಮ್ಮ ಪ್ರೇಮ ಕಥೆ: ರಣವೀರ್ ಸಿಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಅಕ್ಟೋಬರ್ 2021, 7:47 IST
Last Updated 13 ಅಕ್ಟೋಬರ್ 2021, 7:47 IST
ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪ್ರೇಮ ವಿಚಾರ
ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಪ್ರೇಮ ವಿಚಾರ   

ಬೆಂಗಳೂರು: ನಮ್ಮದು ಒಂದು ರೀತಿಯಲ್ಲಿ ಚೇತನ್ ಭಗತ್ ಅವರ ‘ಟು ಸ್ಟೇಟ್ಸ್’ ಕಾದಂಬರಿಯಂತೆ ಇರುವ ಪ್ರೇಮ ಕಥೆ.. ಹೀಗೆಂದು ಹೇಳಿದ್ದು ಬಾಲಿವುಡ್ ನಟ ರಣವೀರ್ ಸಿಂಗ್!

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ದಿ ಬಿಗ್ ಪಿಕ್ಚರ್’ ಕ್ವಿಜ್ ಶೋ ಆರಂಭಕ್ಕೂ ಮುನ್ನ ರಣವೀರ್ ಕುರಿತು ಕಲರ್ಸ್ ಕಿರು ವಿಡಿಯೊ ಒಂದನ್ನು ಪ್ರಕಟಿಸಿದೆ.

ಜತೆಗೆ, ಪ್ರೋಮೊ ವಿಡಿಯೊದಲ್ಲಿ ರಣವೀರ್ ಸಿಂಗ್ ಸ್ವತಃ ಕ್ವಿಜ್‌ನಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ, ದೀಪಿಕಾ ಪಡುಕೋಣೆ ಜತೆಗಿನ ಫೋಟೊ ಒಂದರ ಕುರಿತು ಹೇಳುವಾಗ ಈ ಸಂಗತಿಯನ್ನು ರಣವೀರ್ ಪ್ರಸ್ತಾಪ ಮಾಡಿದ್ದಾರೆ.

ADVERTISEMENT

ದೀಪಿಕಾ ಜತೆಗಿರುವ ಫೋಟೊ ಎಲ್ಲಿಯದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ರಣವೀರ್ ಸಿಂಗ್, ಈ ಪ್ರಶ್ನೆಗೆ ನಾನು ಉತ್ತರಿಸಲೇ ಬೇಕಿದೆ. ಇಲ್ಲದಿದ್ದರೆ ನಾನು ಮನೆಗೆ ಹೋದಾಗ ಏಟು ಬೀಳುವುದು ಖಚಿತ.

ನಿಮಗೇ ತಿಳಿದಿರುವಂತೆ, ನಮ್ಮದು ಚೇತನ್ ಭಗತ್ ಅವರ ಜನಪ್ರಿಯ ಕಾದಂಬರಿ ‘ಟು ಸ್ಟೇಟ್ಸ್’ ರೀತಿಯಲ್ಲೇ ಪ್ರೇಮ ವಿವಾಹವಾಗಿದೆ ಎಂದು ಹೇಳಿದ್ದಾರೆ. ಜತೆಗೆ ಪ್ರಶ್ನೆಗೆ ಸರಿಯಾಗಿ ಉತ್ತರಿಸಿರುವುದಕ್ಕೆ ತನ್ನನ್ನು ‘ಶತಮಾನದ ಗಂಡ’ ಎಂದು ರಣವೀರ್ ಕರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.