ADVERTISEMENT

'83' ಸಿನಿಮಾ ಟ್ರೈಲರ್‌: ವಿಶ್ವಕಪ್‌ ಕ್ರಿಕೆಟ್‌ ಗೆದ್ದ ನೆನಪು... 

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 7:29 IST
Last Updated 30 ನವೆಂಬರ್ 2021, 7:29 IST
ರಣವೀರ್ ಸಿಂಗ್ ನೂತನ ಸಿನಿಮಾ 83
ರಣವೀರ್ ಸಿಂಗ್ ನೂತನ ಸಿನಿಮಾ 83   

ಬೆಂಗಳೂರು: ಟೀಮ್ ಇಂಡಿಯಾ 1983ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದಿರುವ ರೋಚಕ ಕಥೆಯನ್ನು ಹೊಂದಿರುವ '83' ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ.

ಡಿಸೆಂಬರ್‌ 24ರಂದು ’83’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಮಂಗಳವಾರ ಟ್ರೈಲರ್‌ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಯುಟ್ಯೂಬ್‌ನಲ್ಲಿ ಹಿಂದಿಯ ಟ್ರೈಲರ್‌ ಬಿಡುಗಡೆಯಾಗಿ 3 ಗಂಟೆಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ರಣವೀರ್ ಸಿಂಗ್ ಅವರು ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ಕ್ಯಾಪ್ಟನ್ ಕಪಿಲ್ ದೇವ್ ಅವರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಚಿತ್ರದಲ್ಲಿ ರಣವೀರ್‌ ಪತ್ನಿಯಾಗಿ ದೀಪಿಕಾ ಪಡುಕೋಣೆ ಕೂಡ ನಟಿಸಿದ್ದಾರೆ.

ADVERTISEMENT

ಲಾರ್ಡ್ಸ್ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ರೋಚಕ ಫೈನಲ್ ಪಂದ್ಯವನ್ನು 83 ಸಿನಿಮಾದಲ್ಲಿ ತೋರಿಸಲಾಗಿದೆ. ಟ್ರೈಲರ್‌ ನೋಡಿದರೆ ನಿಜವಾದ ಫೈನಲ್‌ ಪಂದ್ಯ ನೋಡಿದಷ್ಟೆ ಖುಷಿ ಕೊಡಲಿದೆ ಎಂದು ಸಿನಿರಸಿಕರು ಕಮೆಂಟ್‌ ಮಾಡಿದ್ದಾರೆ.

ಚಿತ್ರದ ಕುರಿತಂತೆ ಈಗಾಗಲೇ ಬಾಲಿವುಡ್‌ ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ಅಪಾರ ನಿರೀಕ್ಷೆ ಸೃಷ್ಟಿಯಾಗಿದೆ.

ಡಿಸೆಂಬರ್ 24ರಂದು ’83’ ಸಿನಿಮಾ ಕನ್ನಡ ಸಹಿತ ಐದು ಪ್ರಮುಖ ಭಾಷೆಗಳಲ್ಲಿ ತೆರೆ ಕಾಣುತ್ತಿದೆ.

ಕಪಿಲ್‌ ದೇವ್‌ ಪಾತ್ರವನ್ನು ರಣವೀರ್‌ ಸಿಂಗ್‌ ನಿಭಾಯಿಸುತ್ತಿದ್ದರೆ, ಹೆಸರಾಂತ ವಿಕೇಟ್‌ಕೀಪರ್‌ ಕರ್ನಾಟಕದ ಸಯ್ಯದ್‌ ಕಿರ್ಮಾನಿ ಪಾತ್ರವನ್ನು ಸಾಹಿಲ್‌ ಖಟ್ಟರ್‌, ಕೃಷ್ಣಮಾಚಾರಿ ಶ್ರೀಕಾಂತ್‌ ಪಾತ್ರವನ್ನು ಜೀವಾ, ದಿಲೀಪ್‌ ವೆಂಗಸರ್ಕರ್‌ ಪಾತ್ರವನ್ನು ಮರಾಠಿಯ ನಟ ಆದಿನಾಥ್‌ ಕೊಠಾರೊ ನಿಭಾಯಿಸಿದ್ದಾರೆ.

ಕಬೀರ್‌ ಖಾನ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.