
ಮಂತ್ರಾಲಯಕ್ಕೆ ಮಾಜಿ ಸಚಿವ ಸಿ.ಎನ್.ಅಶ್ವಥ್ ನಾರಾಯಣ, ನಟರಾದ ಜಗ್ಗೇಶ್, ರಿಷಭ್ ಶೆಟ್ಟಿ ಭೇಟಿಕೊಟ್ಟು ಶ್ರೀ ಗುರು ರಾಯರ ದರ್ಶನ ಪಡೆದರು. ಸುಬುಧೇಂದ್ರ ಶ್ರೀ ಗಳು ಉಪಸ್ಥಿತರಿದ್ದರು
ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಉತ್ಸವದ (ಜನ್ಮದಿನ) ಪ್ರಯುಕ್ತ, ಮಂಗಳವಾರ ನಟ, ಚಲನಚಿತ್ರ ನಿರ್ದೇಶಕ ರಿಷಭ್ ಶೆಟ್ಟಿ ಭೇಟಿ ನೀಡಿದರು.
ಮಠದ ಅಧಿಕಾರಿಗಳು ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿ ಬರ ಮಾಡಿಕೊಂಡರು. ನಂತರ ಅವರು ದೇವಿ ಉತ್ಸವದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು. ರಿಷಭ್ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನ ಸೇರಿದ ಕಾರಣ ನೂಕು ನುಗ್ಗಲು ಉಂಟಾಯಿತು. ಮಠದ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಪ್ರಯಾಸ ಪಡಬೇಕಾಯಿತು.
ವತ್ತಿ ಛಾಮರ ಹಿಡಿದು ಭಕ್ತರು ಮೆರವಣಿಗೆಯಲ್ಲಿ ಸಾಗಿದರು. ಚೆಂಡಿ ವಾದ್ಯ ಗಮನ ಸೆಳೆಯಿತು.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.