ADVERTISEMENT

ಚಿಕ್ಕಬಳ್ಳಾಪುರದಲ್ಲಿ RRR ಪ್ರಿರಿಲೀಸ್‌ ಅದ್ಧೂರಿ ಕಾರ್ಯಕ್ರಮ: ಪುನೀತ್‌ಗೆ ಅರ್ಪಣೆ

ಮಾರ್ಚ್‌ 19ಕ್ಕೆ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ಧೂರಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2022, 11:37 IST
Last Updated 14 ಮಾರ್ಚ್ 2022, 11:37 IST
ಆರ್‌ಆರ್‌ಆರ್‌ ಪೋಸ್ಟರ್‌
ಆರ್‌ಆರ್‌ಆರ್‌ ಪೋಸ್ಟರ್‌   

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಿಗ್‌ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ ಆರ್‌ಆರ್‌ಆರ್‌(ರೌದ್ರ–ರಣ–ರುಧಿರ) ಬಿಡುಗಡೆಪೂರ್ವ ಕಾರ್ಯಕ್ರಮವು ಮಾ.19ರಂದು ಸಂಜೆ6ಕ್ಕೆ ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಚಿತ್ರತಂಡವು ಈ ಕಾರ್ಯಕ್ರಮವನ್ನು ನಟ, ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಅರ್ಪಿಸಿದೆ. ಕಾರ್ಯಕ್ರಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಕುರಿತ ವಿಶೇಷ ಪ್ರದರ್ಶನವನ್ನೂ ಆಯೋಜಿಸಲಾಗಿದೆ ಎಂದುಕೆವಿಎನ್‌ ಪ್ರೊಡಕ್ಷನ್ಸ್‌ ತಿಳಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್‌ಕುಮಾರ್‌ ಅವರು ವಿಶೇಷ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸ್ವಾತಂತ್ರ್ಯ ಪೂರ್ವ 1920ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಮಾರ್ಚ್‌ 25ರಂದು ತೆರೆಕಾಣುತ್ತಿದೆ. ಬಿಡುಗಡೆಪೂರ್ವ ಕಾರ್ಯಕ್ರಮದಲ್ಲಿ ನಟರಾದ ಜ್ಯೂನಿಯರ್‌ ಎನ್‌ಟಿಆರ್‌, ರಾಮ್‌ಚರಣ್‌ ತೇಜ, ಅಜಯ್‌ ದೇವ್‌ಗನ್‌, ಆಲಿಯಾ ಭಟ್‌ ಸೇರಿದಂತೆ ಚಿತ್ರದ ಎಲ್ಲ ಕಲಾವಿದರು, ಕನ್ನಡ ಮತ್ತು ತೆಲುಗು ಚಿತ್ರರಂಗದ ಪ್ರಮುಖ ತಾರೆಯರೂ ಭಾಗವಹಿಸಲಿದ್ದಾರೆ.

ADVERTISEMENT

ಕಾರ್ಯಕ್ರಮಕ್ಕಾಗಿ 52 ಸಾವಿರ ಚದರಡಿಯ ಬೃಹತ್‌ ಎಲ್‌ಇಡಿ ಪರದೆ ಹಾಗೂ 42 ಬೃಹತ್‌ ಲೇಸರ್‌ ಲೈಟ್‌ಗಳನ್ನು ಅಳವಡಿಸಿರುವ ಬೃಹತ್‌ ವೇದಿಕೆ ತಯಾರಾಗಿದ್ದು, ‘3ಡಿ’ಯಲ್ಲಿ ಸಿನಿಮಾ ಟ್ರೇಲರ್‌ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಗಲಿದೆ. ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.