ADVERTISEMENT

ಸ್ನೇಹಿತರ ದಿನ: ಅಭಿಮಾನಿಗಳಿಗೆ ’ದೋಸ್ತಿ’ ಹಾಡಿನ ಗಿಫ್ಟ್‌ ಕೊಟ್ಟ ‘RRR’ ಚಿತ್ರತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2021, 7:38 IST
Last Updated 1 ಆಗಸ್ಟ್ 2021, 7:38 IST
ಪೋಸ್ಟರ್‌
ಪೋಸ್ಟರ್‌   

ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ‘ಆರ್‌ಆರ್‌ಆರ್‌’ (ರೈಸ್‌–ರೋರ್‌–ರಿವೋಲ್ಟ್‌) ಸಿನಿಮಾದ 'ದೋಸ್ತಿ’ ಮ್ಯೂಸಿಕ್‌ ವಿಡಿಯೊ ಭಾನುವಾರ ಬಿಡುಗಡೆಯಾಗಿದೆ.

ಸ್ನೇಹಿತರ ದಿನವಾದ (ಆಗಸ್ಟ್‌ 1) ಇಂದು ಚಿತ್ರತಂಡ'ದೋಸ್ತಿ’ ಮ್ಯೂಸಿಕ್‌ ವಿಡಿಯೊವನ್ನು ಬಿಡುಗಡೆ ಮಾಡಿದೆ. ಆರ್‌ಆರ್‌ಆರ್‌ ಚಿತ್ರತಂಡ ಬಿಡುಗಡೆ ಮಾಡುತ್ತಿರುವ ಮೊದಲ ಹಾಡು ಇದಾಗಿದೆ.

ಬಾಹುಬಲಿ ಚಿತ್ರಕ್ಕೆ ಸುಮಧುರ ಸಂಗೀತ ನೀಡಿದ್ದ ಎಂಎಂ ಕೀರವಾಣಿ ಅವರೇ ಆರ್‌ಆರ್‌ಆರ್‌ ಸಿನಿಮಾಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ದೋಸ್ತಿ ಮ್ಯೂಸಿಕ್‌ ವಿಡಿಯೊ’ ದಲ್ಲೂ ಕೀರವಾಣಿ ಕಮಾಲ್‌ ಮಾಡಿದ್ದಾರೆ.

ADVERTISEMENT

ಮ್ಯೂಸಿಕ್‌ ವಿಡಿಯೊದಲ್ಲಿ ಹಾಡುಗಾರ ಯಾಜಿನ್‌ ನಿಜ್ಹಾರ್‌ ಬಂದು ಹೋಗುತ್ತಾರೆ. ಹಾಗೇ ತೆಲುಗು, ತಮಿಳು, ಮಲಯಾಳಂ ಹಾಡುಗಾರರು ಭರ್ಜರಿ ಸ್ಟೆಪ್ಸ್‌ ಹಾಕಿದ್ದಾರೆ. ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಾಡಿನ ಕೊನೆಯಲ್ಲಿರಾಮ್‌ಚರಣ್ , ಜೂನಿಯರ್ಎನ್‌ಟಿಆರ್ ಅವರ ಆಗಮನ ಅಭಿಮಾನಿಗಳಿಗೆ ಸಖತ್‌ ಖುಷಿ ಕೊಟ್ಟಿದೆ.

ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಚಿತ್ರವು 20ನೇ ಶತಮಾನದ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕುಮರಾಂ ಭೀಮ್‌ ಅವರ ಜೀವನವನ್ನು ಆಧರಿಸಿದ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಎನ್‌ಟಿಆರ್ ಜೂನಿಯರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟರಾದ ಅಜಯ್ ದೇವ್‌ಗನ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ಸಿನಿಮಾವನ್ನು ಬರುವ ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.