ADVERTISEMENT

ಸಿನಿ ತಾರೆಯರ ಸಂಕ್ರಾಂತಿ ಸಂಭ್ರಮ: ಚಿತ್ರಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:59 IST
Last Updated 15 ಜನವರಿ 2026, 7:59 IST
<div class="paragraphs"><p>ಚಂದನವನದ ತಾರೆಯರು ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.</p></div>

ಚಂದನವನದ ತಾರೆಯರು ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಂ

‘ಕಲ್ಟ್’ ಚಿತ್ರದ ಪೋಸ್ಟರ್ ಹಂಚಿಕೊಂಡು ನಟಿ ರಚಿತಾ ರಾಮ್ ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ್ದಾರೆ. 

ADVERTISEMENT

ನಟಿ ಅದಿತಿ ಪ್ರಭುದೇವ ಅವರು ತಮ್ಮ ಮಗಳು ನೇಸರ ಜೊತೆ ಸಂಕ್ರಾಂತಿಯನ್ನು ಸಂಭ್ರಮಿಸಿದ್ದಾರೆ.

ಎಳ್ಳು ಬೆಲ್ಲ ಹಿಡಿದು ಫೋಟೊ ಕ್ಲಿಕ್ಕಿಸಿಕೊಂಡು ನಟಿ ಕಾರುಣ್ಯ ರಾಮ್ ಸಂಕ್ರಾಂತಿ ಹಬ್ಬಕ್ಕೆ ಶುಭಕೋರಿದ್ದಾರೆ.

ಹಬ್ಬದ ಸಂಭ್ರಮದಲ್ಲಿರುವ ನಟಿ ಮಲೈಕಾ ವಸುಪಾಲ್ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

‘ಬಂದ್ಬುಡ್ತು ಸುಗ್ಗಿ ಹಬ್ಬ ... ನಮ್ ಆಶೋಕ ಅಂಬಿಕಾನ ಕಡೆಯಿಂದ ಎಲ್ಲರಿಗೂ  ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. 

ಎಳ್ಳು-ಬೆಲ್ಲ ತಿಂದ್ಬಿಟ್ಟು, ಹಳೇದ್ನೆಲ್ಲ ಮರ್ತು, ಮಸ್ತ್ ಆಗಿ ಇರ್ರಿ’ ಎಂದು ನಟ ಸತೀಶ್ ನೀನಾಸಂ ಬರೆದುಕೊಂಡಿದ್ದಾರೆ.

ಸಂಕ್ರಾಂತಿ ಹಬ್ಬದ ಪೋಸ್ಟರ್ ಹಂಚಿಕೊಂಡು ಪಿಆರ್‌ಕೆ ಪ್ರೊಡಕ್ಷನ್ ಶುಭಾಶಯ ತಿಳಿಸಿದೆ.

ಅಂಕಿತಾ ಅಮರ್ ನಟನೆಯ  ‘ವೇಷಗಳು’ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಿ ಸಂಕ್ರಾಂತಿ ಹಬ್ಬಕ್ಕೆ  ಚಿತ್ರತಂಡ ಶುಭಕೋರಿದೆ. 

ಸ್ಟೈಲಿಶ್‌ ಲುಕ್‌ನಲ್ಲಿ ನಟ ಗಣೇಶ್ ಅವರು ಫೋಟೊ ಕ್ಲಿಕ್ಕಿಸಿಕೊಂಡು ಸಂಕ್ರಾಂತಿ ಹಬ್ಬವನ್ನು ಸಂಭ್ರಮಿಸಿದ್ದಾರೆ. 

ಹಬ್ಬದಲ್ಲಿ  ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ ನಟಿ ಸಪ್ತಮಿ ಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.