
ಡಿಕೆಡಿ ವೇದಿಕೆಯಲ್ಲಿ ನಟ ಸತೀಶ್ ನೀನಾಸಂ, ನಟಿ ಸಪ್ತಮಿಗೌಡ
ಕೃಪೆ: ಇನ್ಸ್ಟಾಗ್ರಾಂ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ವೇದಿಕೆಗೆ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಪ್ರಚಾರಕ್ಕಾಗಿ ನಟ ಸತೀಶ್ ನೀನಾಸಂ ಹಾಗೂ ನಟಿ ಸಪ್ತಮಿಗೌಡ ಆಗಮಿಸಿದ್ದಾರೆ.
ವಾಹಿನಿ ಹಂಚಿಕೊಂಡ ವಿಡಿಯೊದಲ್ಲಿ ‘ನಟಿ ಅನುಶ್ರೀ ಅವರು ದಿ ರೈಸ್ ಆಫ್ ಅಶೋಕ ಚಿತ್ರತಂಡವನ್ನು ವೇದಿಕೆಗೆ ಬರಮಾಡಿಕೊಂಡಿದ್ದಾರೆ. ಈ ವೇಳೆ ಪುಟಾಣಿ ಡ್ಯಾನ್ಸರ್ ಪ್ರೀತಂ ಅವರು ‘ಕಾಂತಾರ’ ಚಿತ್ರದ ‘ನಮ್ಮನ್ನು ನೋಡಲಿಕ್ಕೆ ನೀವು ಬಂದಿದ್ದೀರಾ.. ನಿಮ್ಮನ್ನು ನೋಡಲು ನಾವು ಬರಬಾರದಾ’ ಎಂದು ಡೈಲಾಗ್ ಹೇಳಿ ಸತೀಶ್ ನೀನಾಸಂ ಹಾಗೂ ನಟಿ ಸಪ್ತಮಿಗೌಡ ಅವರನ್ನು ರಂಜಿಸಿದ್ದಾರೆ. ಪುಟಾಣಿ ಮಾತಿಗೆ ಕಾಂತಾರ ಚೆಲುವೆ ಲೀಲಾ ಮನಸೋತಿದ್ದಾರೆ.
ಸತೀಶ್ ನೀನಾಸಂ, ಸಪ್ತಮಿಗೌಡ
ಈ ವೇದಿಕೆಯಲ್ಲಿ ನಟ ಶಿವರಾಜ್ ಕುಮಾರ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ‘ದಿ ರೈಸ್ ಆಫ್ ಅಶೋಕ’ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಕೆಲ ದಿನಗಳ ಹಿಂದೆ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿತ್ತು. ಈ ಚಿತ್ರವು ಫೆ.27ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಮನು ಶೆಡ್ಗಾರ್ ಅವರು ನಿರ್ದೇಶನ ಮಾಡಿದ್ದಾರೆ. ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.