ADVERTISEMENT

ಕುಟುಂಬದ ಜತೆ ಶಾಹಿದ್ ಪಿಕ್‌ನಿಕ್

ಏಜೆನ್ಸೀಸ್
Published 28 ಮೇ 2019, 4:42 IST
Last Updated 28 ಮೇ 2019, 4:42 IST
ಶಾಹಿದ್ ಕಪೂರ್, ಮೀರಾ ಕಪೂರ್
ಶಾಹಿದ್ ಕಪೂರ್, ಮೀರಾ ಕಪೂರ್   

‘ಕಬೀರ್ ಸಿಂಗ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಬ್ಯುಸಿಯಾಗುವ ಮುನ್ಸೂಚನೆ ದೊರೆತ ಶಾಹಿದ್ ಕಪೂರ್, ಪತ್ನಿ ಮೀರಾ, ಮಕ್ಕಳಾದ ಮಿಶಾ ಮತ್ತು ಜೇನ್ ಕಪೂರ್ ಜೊತೆಗೆ ಪಿಕ್‌ನಿಕ್‌ಗೆ ತೆರಳಿದ್ದಾರೆ.

ಚಿತ್ರರಂಗ ಮತ್ತು ಅಭಿಮಾನಿಗಳ ವಲಯದಲ್ಲಿ ‘ಫ್ಯಾಮಿಲಿ ಮ್ಯಾನ್’ ಅಂತಲೇ ಶಾಹಿದ್ ಗುರುತಿಸಿಕೊಂಡಿದ್ದು, ವೈಯಕ್ತಿಕ ಜೀವನದ ಸಂತಸದ ಕ್ಷಣಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಪ್ಪದೇ ಹಂಚಿಕೊಳ್ಳುವ ಅಭ್ಯಾಸ ಹೊಂದಿದ್ದಾರೆ. ಸಿನಿಮಾ ಅಥವಾ ಸಿನಿಮೇತರ ಕಾರ್ಯಕ್ರಮಗಳಿರಲಿ ಅಲ್ಲಿ ಪತ್ನಿ ಮೀರಾಳ ಹಾಜರಿ ಕಡ್ಡಾಯವಾಗಿರುವಂತೆ ನೋಡಿಕೊಳ್ಳುತ್ತಾರೆ ಶಾಹಿದ್. ಇನ್ನು ಪುಟ್ಟ ಮಕ್ಕಳಾದ ಮಿಶಾ ಮತ್ತು ಜೇನ್ ವಿಷಯಕ್ಕೆ ಬಂದಲ್ಲಿ ಶೂಟಿಂಗ್‌ ಮುಗಿಸಿ ಎಷ್ಟೇ ದಣಿವಾಗಿದ್ದರೂ ಮಕ್ಕಳ ಜೊತೆ ಆಟವಾಡುವುದನ್ನು ಶಾಹಿದ್ ತಪ್ಪಿಸುವುದಿಲ್ಲ.

ಈಚೆಗಷ್ಟೇ ಕುಟುಂಬದ ಜೊತೆಗೆ ಸಿಂಗಪುರಕ್ಕೆ ತೆರಳಿದ್ದ ಶಾಹಿದ್ ಅಲ್ಲಿ ತಮ್ಮ ಮೇಣದ ಪ್ರತಿಮೆಯನ್ನು ಕಂಡು ಅಚ್ಚರಿಪಟ್ಟರು. ಮಿರಾ ಒಂದು ಕೈಯಲ್ಲಿ ಮೇಣದ ಶಾಹಿದ್‌ನನ್ನು ಮತ್ತೊಂದು ಕೈಯಲ್ಲಿ ಜೀವಂತ ಶಾಹಿದ್‌ ಕೈ ಹಿಡಿದು ಫೋಟೊಗಳಿಗೆ ಫೋಸ್ ನೀಡಿದರು. ನಂತರ ಹೆಂಡತಿ–ಮಕ್ಕಳೊಂದಿಗೆ ಥಾಯ್ಲೆಂಡ್‌ನ ಫುಕೆಟ್ ಸಮುದ್ರ ತೀರದಲ್ಲಿ ಕಾಲ ಕಳೆದ ಶಾಹಿದ್, ಪತ್ನಿ ಮೀರಾ ಜೊತೆಗಿನ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ದೊಡ್ಡ ಸನ್‌ಗ್ಲಾಸ್ ಹಾಕಿಕೊಂಡಿರುವ ಶಾಹಿದ್ ‘ನಾವು’ ಅನ್ನುವ ಶೀರ್ಷಿಕೆಯನ್ನೂ ನೀಡಿದ್ದಾರೆ. ಮೇಕಪ್ ಇಲ್ಲದೆಯೂ ಮೀರಾ ಮುದ್ದಾಗಿ ಕಾಣುತ್ತಿದ್ದಾರೆ.ಸಮುದ್ರದ ದಂಡೆಯಲ್ಲಿ ಮರಳ ಮೇಲಿರುವ ಮಕ್ಕಳ ಚಿತ್ರವನ್ನು ಮೀರಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕಿಕೊಂಡಿದ್ದಾರೆ.

ADVERTISEMENT

ತೆಲುಗಿನ ಹಿಟ್ ಸಿನಿಮಾ ’ಅರ್ಜುನ್ ರೆಡ್ಡಿ’ ರಿಮೇಕ್ ಆಗಿರುವ ‘ಕಬೀರ್ ಸಿಂಗ್‌’ ಜೂನ್ 21ರಂದು ಬಿಡುಗಡೆಯಾಗಲಿದೆ. ತೆಲುಗಿನಲ್ಲಿ ವಿಜಯ್ ದೇವರಕೊಂಡ ಮಾಡಿದ್ದ ಪಾತ್ರವನ್ನು ಶಾಹಿದ್ ಕಪೂರ್ ನಿರ್ವಹಿಸಿದ್ದು, ಕಿಯಾರ ಅಡ್ವಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.