ADVERTISEMENT

PV Cine Samman: ‘ಶಾಖಾಹಾರಿ’ಯ ಸುಬ್ಬಣ್ಣನಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 23:53 IST
Last Updated 3 ಜುಲೈ 2025, 23:53 IST
ರಂಗಾಯಣ ರಘು 
ರಂಗಾಯಣ ರಘು    

ಜನಮೆಚ್ಚಿದ ನಟ: ರಂಗಾಯಣ ರಘು, ಚಿತ್ರ: ಶಾಖಾಹಾರಿ 

‘ಶಾಖಾಹಾರಿ’ ಸಿನಿಮಾ ಬಳಿಕ ‘ಅಭಿನಯಾಸುರ’ ಎಂಬ ಬಿರುದು ಪಡೆದಿರುವ ನಟ ರಂಗಾಯಣ ರಘು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಶೈಲಿಯಿಂದಲೇ ಗುರುತಿಸಿಕೊಂಡಿದ್ದಾರೆ. ನಾಯಕ ನಟನಾಗಿ ಇರುವವರು ಸಮಯ ಉರುಳಿದಂತೆ ಪೋಷಕ ನಟನಾಗಿ ಹೆಜ್ಜೆ ಇಡುವುದು ಸಾಮಾನ್ಯ. ಆದರೆ ಖಳನಾಯಕ, ಹಾಸ್ಯ, ಪೋಷಕ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿರುವ ರಂಗಾಯಣ ರಘು ಅವರು ಸದ್ಯ ನಾಯಕ ನಟನಾಗಿ ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಇವರು ‘ಶಾಖಾಹಾರಿ’ ಚಿತ್ರದಲ್ಲಿನ ನಟನೆಗಾಗಿ ‘ಕಾಸಾಗ್ರಾಂಡ್‌’ ಜನಮೆಚ್ಚಿದ ನಟ ಪ್ರಶಸ್ತಿ ಪಡೆದಿದ್ದಾರೆ. 

ನಟ ಶಿವರಾಜ್‌ಕುಮಾರ್‌ ಪ್ರಶಸ್ತಿ ಪ್ರದಾನ ಮಾಡಿದರು. ‘ಶಿವಣ್ಣನ ಕೈಯಲ್ಲಿ ಪ್ರಶಸ್ತಿ ತೆಗೆದುಕೊಳ್ಳುತ್ತಿರುವುದು ಖುಷಿಯಾಗಿದೆ. ಅವರಿಂದ ನಾನು ಚಿತ್ರರಂಗಕ್ಕೆ ಬಂದೆ. ಕಳೆದ ವರ್ಷ ‘ಟಗರುಪಲ್ಯ’ ಚಿತ್ರಕ್ಕೆ ಪೋಷಕ ನಟ ಪ್ರಶಸ್ತಿ ಪಡೆದಿದ್ದೆ. ಈಗ ‘ಶಾಖಾಹಾರಿ’ಗೆ ಪ್ರಶಸ್ತಿ ಪಡೆದಿದ್ದೇನೆ. ಶಿವಮೊಗ್ಗದ ಹುಡುಗರು ಸೇರಿ ಮಾಡಿದ ಸಿನಿಮಾ ಇದು. ಆ ತಂಡಕ್ಕೆ ಈ ಪ್ರಶಸ್ತಿ ಅರ್ಪಿಸುತ್ತೇನೆ. ಗಣೇಶ್‌, ವಿಜಯ್‌ ಹಾಗೂ ಅಪ್ಪು ಅವರನ್ನು ನನ್ನ ಈ ಸಿನಿಪಯಣದಲ್ಲಿ ಮರೆಯಲು ಸಾಧ್ಯವಿಲ್ಲ. ಸಂದೀಪ್‌ ಸುಂಕದ್‌ ಅವರು ಈ ಚಿತ್ರದಲ್ಲಿನ ನನ್ನ ಪಾತ್ರವನ್ನು ವಿವರಿಸಿದಾಗ, ಇದು ನಟನೆ ಮಾಡುವ ಪಾತ್ರ ಎಂದು ಅರಿತುಕೊಂಡೆ’ ಎಂದರು ರಂಗಾಯಣ ರಘು.       

ನಾಮನಿರ್ದೇಶನಗೊಂಡವರು: ರಂಗಾಯಣ ರಘು(ಶಾಖಾಹಾರಿ), ಕಿಚ್ಚ ಸುದೀಪ್‌(ಮ್ಯಾಕ್ಸ್‌), ಮಹಾದೇವ ಹಡಪದ(ಫೋಟೋ), ದುನಿಯಾ ವಿಜಯ್‌(ಭೀಮ), ಪ್ರಮೋದ್‌ ಶೆಟ್ಟಿ(ಲಾಫಿಂಗ್‌ ಬುದ್ಧ), ವಿನಯ್‌ ರಾಜ್‌ಕುಮಾರ್‌(ಪೆಪೆ), 
ದಿಗಂತ್‌(ಮಾರಿಗೋಲ್ಡ್‌), ರಾಜವರ್ಧನ್‌(ಹಿರಣ್ಯ), ಗೌರಿಶಂಕರ್‌(ಕೆರೆಬೇಟೆ)  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.