
ಗಾಯಕಿ ಎಸ್. ಜಾನಕಿ, ನಟಿ ಸುಧಾರಾಣಿ
ಚಿತ್ರ: ಇನ್‌ಸ್ಟಾಗ್ರಾಮ್
ಸ್ಯಾಂಡಲ್‌ವುಡ್ ನಟಿ ಸುಧಾರಾಣಿ ತಮ್ಮ ಬಹುದಿನದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ನಟಿ ಸುಧಾರಾಣಿ ಅವರು ಖ್ಯಾತ ಗಾಯಕಿ ಎಸ್. ಜಾನಕಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಭಾವುಕರಾಗಿದ್ದಾರೆ.
ಇದೀಗ ನಟಿ ಸುಧಾರಾಣಿ ಸಾಮಾಜಿಕ ಮಾಧ್ಯಮದಲ್ಲಿ ಎಸ್. ಜಾನಕಿ ಅವರನ್ನು ಭೇಟಿಯಾದ ಸುಂದರ ಕ್ಷಣವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಎಸ್. ಜಾನಕಿ ಅವರ ಮನೆಗೆ ಭೇಟಿ ನೀಡುವ ಮೂಲಕ ಬಹುದಿನದ ಕನಸ್ಸನ್ನು ನಟಿ ಸುಧಾರಾಣಿ ಈಡೇರಿಸಿಕೊಂಡಿದ್ದಾರೆ.
ನಟಿ ಹಂಚಿಕೊಂಡ ವಿಡಿಯೊ ಜೊತೆಗೆ ‘ಕನಸು ನನಸಾಯಿತು. ಸರಸ್ವತಿ ದೇವಿಯನ್ನೇ ಭೇಟಿಯಾದೆ. ಈ ಕ್ಷಣ ನನ್ನ ಹೃದಯದಲ್ಲಿ ಯಾವಾಗಲೂ ಅಚ್ಚೊತ್ತಿರುತ್ತದೆ. ಕೃಪೆ, ಘನತೆ ಮತ್ತು ನಮ್ರತೆಯ ಪ್ರತಿರೂಪ. ಆನಂದ್ ಚಿತ್ರದ ಹಾಡನ್ನು ಅವರು ನನಗಾಗಿ ಹಾಡಿದಾಗ ನಾನು ಮೂಕವಿಸ್ಮಿತಳಾದೆ. ಕನ್ನಡದಲ್ಲಿ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಸಹ ಅವರು ನನ್ನನ್ನು ಆಶೀರ್ವದಿಸಿದಾಗ ಭಾವುಕಳಾದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.