ADVERTISEMENT

ಸರೋಜಿನಿ ನಾಯ್ಡು ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸೋನಲ್ ಮೊಂತೆರೋ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2022, 12:18 IST
Last Updated 29 ಮಾರ್ಚ್ 2022, 12:18 IST
ನಟಿ ಸೋನಲ್ ಮೊಂತೆರೋ
ನಟಿ ಸೋನಲ್ ಮೊಂತೆರೋ   

ಬೆಂಗಳೂರು: ಕೋಸ್ಟಲ್‌ವುಡ್‌ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸೋನಲ್ ಮೊಂತೆರೋ, ಬಾಲಿವುಡ್‌ನಲ್ಲಿ ಚೊಚ್ಚಲ ಸಿನಿಮಾ ಮಾಡುತ್ತಿದ್ದಾರೆ.

ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸಿನಿಮಾವನ್ನು ಸಂಗೀತ ನಿರ್ದೇಶಕ ವಿನಯ್ ಚಂದ್ರ ನಿರ್ದೇಶನ ಮಾಡುವ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ.

‘ಸರೋಜಿನಿ‘ ಸಿನಿಮಾದ ಫಸ್ಟ್‌ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಶಾಂತಿಪ್ರಿಯ ಅವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಸರೋಜಿನಿ ನಾಯ್ಡು ಯುವತಿಯಾಗಿರುವ ಸಂದರ್ಭದ ಪಾತ್ರವನ್ನು ಮಂಗಳೂರು ಮೂಲದ ನಟಿ ಸೋನಲ್ ನಿರ್ವಹಿಸಲಿದ್ದಾರೆ.

ADVERTISEMENT

‘ಭಾರತದ ಕೋಗಿಲೆ‘ ಖ್ಯಾತಿಯ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವುದಕ್ಕೆ ಮತ್ತು ಬಾಲಿವುಡ್‌ನಲ್ಲಿ ಅವಕಾಶ ಪಡೆದುಕೊಂಡಿರುವುದಕ್ಕೆ ಸೋನಲ್ ಅವರು ಹರ್ಷ ವ್ಯಕ್ತಪಡಿಸಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ನಟಿಸುವುದು ಬಹುಕಾಲದ ಕನಸಾಗಿದ್ದು, ಅದೀಗ ನೆರವೇರುತ್ತಿದೆ ಎಂದು ಸೋನಲ್ ಹೇಳಿದ್ದಾರೆ.

ಸರೋಜಿನಿ ಸಿನಿಮಾದ ಚಿತ್ರೀಕರಣ ಜೂನ್‌ನಲ್ಲಿ ಆರಂಭವಾಗಲಿದ್ದು, ಉತ್ತರ ಪ್ರದೇಶ ಮತ್ತು ಮುಂಬೈನಲ್ಲಿ ಹಾಗೂ ಬೆಂಗಳೂರು, ಕೊಡಗಿನಲ್ಲೂ ಕೆಲವು ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ ಎಂದು ನಿರ್ದೇಶಕ ವಿನಯ್ ಚಂದ್ರ ಹೇಳಿದ್ದಾರೆ.

ಕಾಲ್‌ಶೀಟ್‌ ಸಮಸ್ಯೆಯಿಂದಾಗಿ ನಟಿ ರಚಿತಾ ರಾಮ್‌ ಅವರು ಯೋಗರಾಜ್‌ ಭಟ್‌ ನಿರ್ದೇಶನದ ‘ಗರಡಿ’ ಚಿತ್ರದಿಂದ ಹೊರಬಿದ್ದ ಬಳಿಕ, ನಾಯಕಿ ಸ್ಥಾನಕ್ಕೆ ಸೋನಲ್‌ ಮೊಂತೆರೋ ಆಯ್ಕೆಯಾಗಿದ್ದರು.

ಯೋಗರಾಜ್‌ ಭಟ್‌ ಅವರೇ ನಿರ್ದೇಶಿಸಿದ್ದ ‘ಪಂಚತಂತ್ರ’ ಸಿನಿಮಾ ಮೂಲಕವೇ ಕೋಸ್ಟಲ್‌ವುಡ್‌ನಿಂದ ಚಂದನವನಕ್ಕೆ ನಾಯಕಿಯಾಗಿ ಹೆಜ್ಜೆ ಇಟ್ಟಿದ್ದ ನಟಿ ಸೋನಲ್‌ ಮೊಂತೆರೋ ಸದ್ಯಕ್ಕೆ ಚಂದನವನದ ಬಹುಬೇಡಿಕೆಯ ನಟಿ.

‘ರಾಬರ್ಟ್‌’ ಸಿನಿಮಾದ ‘ತನು’ ಪಾತ್ರದ ಯಶಸ್ಸಿನ ಬಳಿಕ ಸಾಲು ಸಾಲು ಆಫರ್‌ಗಳು ಸೋನಲ್‌ ಅವರನ್ನು ಅರಸಿಕೊಂಡು ಬಂದಿವೆ.

‘ಪದವಿಪೂರ್ವ’, ‘ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ’, ‘ಬನಾರಸ್‌’, ‘ಶುಗರ್‌ ಫ್ಯಾಕ್ಟರಿ’, ‘ತಲ್ವಾರ್‌ ಪೇಟೆ’, ‘ನಟವರ್‌ಲಾಲ್‌’, ‘ಶಂಭೋ ಶಿವಶಂಕರ’, ‘ಬುದ್ಧಿವಂತ–2’ ಹೀಗೆ ಸೋನಲ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಸಿನಿಮಾಗಳ ಪಟ್ಟಿ ಬೆಳೆಯುತ್ತದೆ. ಇದಕ್ಕೆ ಹೊಸ ಸೇರ್ಪಡೆ ‘ಗರಡಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.