ADVERTISEMENT

ಸಾಂಪ್ರದಾಯಿಕ ಕಲಂಕಾರಿ ಸೀರೆಯಲ್ಲಿ ನಟಿ ಸೋನಮ್ ಕಪೂರ್ ಬೇಬಿ ಬಂಪ್ ಪೋಟೊಶೂಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಫೆಬ್ರುವರಿ 2026, 9:35 IST
Last Updated 14 ಫೆಬ್ರುವರಿ 2026, 9:35 IST
<div class="paragraphs"><p>ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್‌ ನಟಿ ಸೋನಮ್&nbsp;ಕಪೂರ್ ಅವರು ಸಾಂಪ್ರದಾಯಿಕ ಕಲಂಕಾರಿ ಸೀರೆ ಧರಿಸಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿದ್ದಾರೆ.</p></div>

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್‌ ನಟಿ ಸೋನಮ್ ಕಪೂರ್ ಅವರು ಸಾಂಪ್ರದಾಯಿಕ ಕಲಂಕಾರಿ ಸೀರೆ ಧರಿಸಿ ಬೇಬಿ ಬಂಪ್ ಪೋಟೊಶೂಟ್ ಮಾಡಿಸಿದ್ದಾರೆ.

   

ಕೃಪೆ: ಇನ್‌ಸ್ಟಾಗ್ರಾಂ

ಸೋನಮ್ ಅವರು ಧರಿಸಿರುವ ಗುಲಾಬಿ ಬಣ್ಣದ ಕಲಂಕಾರಿ ಸೀರೆಯ ಮೇಲೆ ವಿವಿಧ ಬಣ್ಣಗಳ ಕಲಾಕೃತಿಯನ್ನು ಕಾಣಬಹುದು.

ADVERTISEMENT

ಸೋನಮ್ ಅವರು ಸೀರೆಗೆ ಹೊಂದಿಕೆಯಾಗುವಂತೆ ಕುಂದನ್ ಆಭರಣಗಳನ್ನು ಧರಿಸಿದ್ದಾರೆ.

ಬೇಬಿ ಬಂಪ್ ಪೋಟೊಶೂಟ್ ಪೋಸ್ಟ್ ಹಂಚಿಕೊಂಡ ಸೋನಮ್, ‘ಪಿಂಕ್  ಕಲಂಕಾರಿ ಸೀರೆಯು ಮೃದುವಾಗಿದ್ದು ಧರಿಸಲು  ಆರಾಮದಾಯಕ ಎನಿಸುತ್ತದೆ. ಅಲ್ಲದೆ ಇದು ಸಾಂಪ್ರದಾಯಿಕ ಮೆರುಗನ್ನು ನೀಡುತ್ತದೆ. ಈ ಸೀರೆಯ ವಿನ್ಯಾಸವು ಮೆಟ್ ಮ್ಯೂಸಿಯಂನಲ್ಲಿರುವ 19ನೇ ಶತಮಾನದ ಕಲಾಕೃತಿಯನ್ನು ನೆನಪಿಸುವಂತಿದೆ. ಇಂತಹ ವಿಶೇಷ ವಸ್ತ್ರಗಳು ಯಾವಾಗಲೂ ನನ್ನನ್ನು ಸೆಳೆಯುತ್ತವೆ’ ಎಂದು ಬರೆದುಕೊಂಡಿದ್ದಾರೆ. 

ತುಂಬು ಗರ್ಭಿಣಿ ಸೋನಮ್ ಅವರಿಗೆ ಕುಟುಂಬಸ್ಥರು ಕೆಲ ದಿನಗಳ ಹಿಂದೆ ಸೀಮಂತ ಶಾಸ್ತ್ರ ಮಾಡಿದ್ದರು.

ಸೋನಮ್ ಅವರು ಉದ್ಯಮಿ ಆನಂದ್ ಅಹುಜಾ ಜತೆ 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

2022ರಲ್ಲಿ ತಮ್ಮ ಮೊದಲ ಮಗು ವಾಯು ಕಪೂರ್‌ಗೆ ಜನ್ಮ ನೀಡಿದ್ದ ದಂಪತಿ, ಈಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸೋನಮ್ ಅವರು ಮದುವೆಯ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದಾರೆ. 2018ರಿಂದ ಇಲ್ಲಿಯವರೆಗೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.